ಕಾಸರಗೋಡು: ಕೋವಿಡ್ 19 ಹಿನ್ನೆಲೆಯಲ್ಲಿ ಲಾಕ್ ಡೌನ್, ಅತಿವೃಷ್ಟಿ ಇತ್ಯಾದಿಗಳ ಕಾರಣ ಕೃಷಿಕರ ಸಹಾಯಕ್ಕೆ ಪಿಲಿಕೋಡ್ ಉತ್ತರ ವಲಯ ಕೃಷಿ ಸಂಶೋಧನೆ ಕೆಂದ್ರ ಹೆಲ್ಪ್ ಡೆಸ್ಕ್ ಗಳನ್ನು ಸಜ್ಜುಗೊಳಿಸಿದೆ.
ಕೃಷಿ ಸಂಬಂಧ ಯಾವುದೇ ಸಂಶಯಗಳ ನಿವಾರಣೆಗೆ, ಬೀಜ, ನೇಜಿ ಸಾಮಾಗ್ರಿಗಳ ಲಭ್ಯತೆ ಇತ್ಯಾದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಈ ಕೆಳಗೆ ತಿಳಿಸಲಾದ ದೂರವಾಣಿ ಸಂಖ್ಯೆಗಳಿಗೆ ಕರೆಮಾಡಬಹುದು.
ವಿಷಯ-ವಿಜ್ಞಾನಿಗಳು-ದೂರವಾಣಿ ಸಂಖ್ಯೆ ಎಂಬ ಕ್ರಮ
ದಲ್ಲಿ :
ತೆಂಗು ಕೃಷಿಯ ವಿಧಾನ ಮತ್ತು ಹವಾಮಾನ-ರತೀಶ್ ಪಿ.ಕೆ. ಸಹಾಯಕ ಪ್ರಾಚಾರ್ಯ-9447704019.
ಗೇರು, ತರಕಾರಿ ಕೃಷಿ ವಿಧಾನ ಮತ್ತು ಹವಾಮಾನ-ಡಾ.ಮೀರಾ ಮಂಜೂಷಾ, ಸಹಾಯಕ, ಪ್ರಾಚಾರ್ಯೆ-9895514994.
ಭತ್ತದ ಕೃಷಿ ವಿಧಾನ -ಸಿನೀಷ್ ಎಂ.ಎಸ್.ಸಹಾಯಕ ಪ್ರಾಚಾರ್ಯ-9447923417.
ವಿವಿಧ ಬೆಳೆಗಳ, ಸಸ್ಯ ಸಂರಕ್ಷಣೆ, ರೋಗಗಳು-ಸಂಜು ಬಾಲನ್, ಸಹಾಯಕ ಪ್ರಾಚಾರ್ಯ-9400108537.
ಕೀಟಗಳು-ಲೀನಾ ಎಂ.ಕೆ., ಸಹಾಯಕ ಪ್ರಾಚಾರ್ಯೆ-8943225922.
ಮೃಗಸಂರಕ್ಷಣೆ-ಡಾ.ಅನಿ ಎಸ್.ದಾಸ್- ಅಸೋಸಿಯೇಟ್ ಪೆÇ್ರಫೆಸರ್-9447242240.
ಬೀಜ, ನೇಜಿ ಸಾಮಾಗ್ರಿಗಳು-ಅನುಪಮಾ ಎಸ್. ಸಹಾಯಕ ಪ್ರಾಚಾರ್ಯೆ-9846334758.
ಈ ಸೇವೆ ಲಾಕ್ ಡೌನ್ ಅವಧಿಯಲ್ಲಿ ಮಾತ್ರ ಇರುವುದು. ಜೊತೆಗೆ ಮೇ 27ರಂದು ರಾತ್ರಿ 8 ಗಂಟೆಯಿಂದ 9 ಗಂಟೆ ವರೆಗೆ ಕೇಂದ್ರದ ಫೇಸ್ ಬುಕ್ ಪುಟದಲ್ಲಿ ವಿಜ್ಞಾನಿಗಳು ಕೃಷಿಕರೊಂದಿಗೆ ನೇರಸಂವಾದ ನಡೆಸುವರು.