ತಿರುವನಂತಪುರ: ಮೇ 8 ರಿಂದ 16 ರವರೆಗೆ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡಾನ್ ಘೋಷಣೆಯಾಗಿದ್ದು, ದೂರದ ಪ್ರಯಾಣಿಕರ ಬೇಡಿಕೆಯಂತೆ ಕೆ ಎಸ್ ಆರ್ ಟಿ ಸಿ ಇಂದು ರಾತ್ರಿ ಯಿಂದ ನಾಳೆ ರಾತ್ರಿಯವರೆಗೆ ಗರಿಷ್ಠ ಸಂಖ್ಯೆಯ ಬಸ್‍ಗಳನ್ನು ರಸ್ತೆಗಿಳಿಸಲಿದೆ. ಈ ಬಗ್ಗೆ ಸಿಎಂಡಿ ಬಿಜು ಪ್ರಭಾಕರ್ ಮಾಹಿತಿ ನೀಡಿದರು.
ಅಗತ್ಯವಿದ್ದರೆ, ಸರ್ಕಾರದ ನಿರ್ದೇಶನದಂತೆ ತುರ್ತು ಊರಿಗೆ ಮರಳುವವರಿಗಾಗಿ ಬೆಂಗಳೂರಿನಿಂದ ಕೇರಳಕ್ಕೆ ಮೂರು ಬಸ್ಸುಗಳನ್ನು ಓಡಿಸಲಾಗುವುದು. ಕರ್ನಾಟಕ ಸರ್ಕಾರ ಅವಕಾಶ ನೀಡಿದರೆ ಅಲ್ಲಿಂದ ಈ ಸೇವೆಯನ್ನು ನಡೆಸಲಾಗುವುದು ಎಂದು ಸಿಎಂಡಿ ತಿಳಿಸಿದೆ.
ಆಸ್ಪತ್ರೆಯ ಸಿಬ್ಬಂದಿ ಮತ್ತು ರೋಗಿಗಳಿಗೆ ಸೇವೆಗಳನ್ನು ಒದಗಿಸಲು ಕೆ.ಎಸ್.ಆರ್.ಟಿ.ಸಿ ಸಿದ್ಧವಾಗಿದೆ. ಸಂಬಂಧಪಟ್ಟ ಆಸ್ಪತ್ರೆಗಳ ಅಧೀಕ್ಷಕರು ಆಯಾ ಪ್ರದೇಶಗಳಲ್ಲಿನ ಘಟಕ ಕಚೇರಿಗಳಿಗೆ ಮಾಹಿತಿ ನೀಡಿ ಅಗತ್ಯ ಸೇವೆಗಳನ್ನು ಪಡೆಯಬಹುದು. ಕೆ.ಎಸ್.ಆರ್.ಟಿ.ಸಿ.ಯ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಿ ಅದಕ್ಕೆ ವ್ಯವಸ್ಥೆ ಮಾಡಿಕೊಳ್ಳಬಹುದು ಎಂದು ಹೇಳಿರುವರು.