ತಿರುವನಂತಪುರ: ಸಾರ್ವಜನಿಕ ಸಂಪರ್ಕ ಮತ್ತು ಮಾಹಿತಿ ವಿಭಾಗವನ್ನು(ಪಿ.ಆರ್.ಡಿ) ಲಾಕ್‍ಡೌನ್ ನಿಬಂಧನೆಗಳಿಂದ ವಿನಾಯ್ತಿ ನೀಡಲಾಗುವ ಅತಿ ತುರ್ತು ವಿಭಾಗಕ್ಕೆ ಸೇರ್ಪಡೆಗೊಳಿಸಲು ಸರ್ಕಾರ ಆದೇಶ ನೀಡಿದೆ.
ಸ್ಥಳೀಯಾಡಳಿತ ಸಂಸ್ಥೆಗಳ ಪ್ರಮುಖ ಅಧಿಕಾರಿಗಳೂ, ಅವರ ಜೊತೆಗೆ ಕಾರ್ಯನಿರ್ವಹಿಸುವ ನೌಕರರು ಅವರವರ ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಕೋವಿಡ್ ವಿರುದ್ದ ಕಾರ್ಯಚಟುವಟಿಕೆಗಳಿಗೆ ಬಳಸಲೂ ಸರ್ಕಾರ ನಿರ್ದೇಶನ ನೀಡಿದೆ.
ಸೆಬಿ ನಿಯಂತ್ರಿತ ಸ್ಟಾಕ್ ಮಾರುಕಟ್ಟೆಯ ಸಂಸ್ಥೆಗಳಿಗೆ ನಿದಿಪಡಿಸಿದ ಸಮಯಗಳಲಲಿ ಪೂರೈಸಬೇಕಾದ ಆರ್ಥಿಕ ಚಟುವಟಿಕೆಗಳ ನಿರ್ವಹಣೆಗಾಗಿ ಎಸ್.ಎಲ್. ಬಿ.ಸಿ ಸದಸ್ಯರಾಗಿರುವ ಬ್ಯಾಂಕ್ ಗಳ ಕ್ಲಿಯರಿಂಗ್ ವ್ಯವಸ್ಥೆಗಳಿಗೆ ಅತೀ ಕಡಿಮೆ ನೌಕರರೊಂದಿಗೆ ಎಲ್ಲಾ ಕರ್ತವ್ಯದ ದಿನಗಳಲ್ಲೂ ಕಾರ್ಯನಿರ್ವಹಿಸಬಹುದೆಂದು ರಾಜ್ಯ ಮುಖ್ಯ ಕಾರ್ಯದರ್ಶಿಗಳ ಸುತ್ತೋಲೆಯಲ್ಲಿ ತಿಳಿಸಲಾಗಿದೆ.