HEALTH TIPS

ಸಿಆರ್ ಪಿಎಫ್ ಡಿಜಿ ಕುಲದೀಪ್ ಸಿಂಗ್ ಗೆ 'ಎನ್‌ಐಎ' ಹೆಚ್ಚುವರಿ ಹೊಣೆಗಾರಿಕೆ

             ನವದೆಹಲಿಸಿಆರ್ ಪಿಎಫ್ ಡಿಜಿ ಕುಲದೀಪ್ ಸಿಂಗ್ ಅವರಿಗೆ ರಾಷ್ಟ್ರೀಯ ತನಿಖಾ ದಳದ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದ್ದು, ಎನ್‌ಐಎ ಡಿಜಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

         ಈ ಹಿಂದೆ ಎನ್‌ಐಎ ಡಿಜಿಯಾಗಿದ್ದ ವೈಸಿ ಮೋದಿ ಅವರು ಇದೇ ಸೋಮವಾರ ನಿವೃತ್ತಿಯಾಗಲಿದ್ದು, ಅವರ ಸ್ಥಾನಕ್ಕೆ ಇದೀಗ ಸಿಆರ್ ಪಿಎಫ್ ಡಿಜಿ ಕುಲದೀಪ್ ಸಿಂಗ್ ಅವರನ್ನು ನಿಯೋಜಿಸಲಾಗಿದೆ.

             ವೈಸಿ ಮೋದಿ ಅವರು ಅಸ್ಸಾಂ-ಮೇಘಾಲಯ ಕೇಡರ್ ನ 1984 ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದು, 2017ರ ಸೆಪ್ಟೆಂಬರ್ ನಲ್ಲಿ ಉಗ್ರ ನಿಗ್ರಹದಳದ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಇದೀಗ ಕಾಂಪಿಟೆಂಟ್ ಅಥಾರಿಟಿ ಕುಲದೀಪ್ ಸಿಂಗ್ ಅವರನ್ನು ಎನ್‌ಐಎ ಡಿಜಿಯಾಗಿ ಆಯ್ಕೆ ಮಾಡಿದೆ. ಕುಲದೀಪ್ ಸಿಂಗ್ ಅವರು ಪ್ರಸ್ತುತ ಸಿಆರ್ ಪಿಎಫ್ ನ ಡಿಜಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ಎನ್‌ಐಎ ಡಿಜಿ ಆಯ್ಕೆಯಾಗುವವರೆಗೂ ಹೆಚ್ಚವರಿ ಎನ್‌ಐಎ ಡಿಜಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries