ನವದೆಹಲಿ: ಡಿಜಿಟಲ್ ಲೋಕದ ಬೃಹತ್ ಕಂಪನಿಗಳಾದ ಗೂಗಲ್ ಹಾಗೂ ಫೇಸ್‌ಬುಕ್ ತನ್ನ ವೆಬ್‌ಸೈಟ್‌ನಲ್ಲಿ ಹೊಸ ಐಟಿ ನಿಯಮದ ಪ್ರಕಾರ ಅಪ್‌ಡೇಟ್ ಮಾಡಲು ಆರಂಭಿಸಿವೆ. ಇದರ ಭಾಗವಾಗಿ ಈ ಕಂಪನಿಗಳ ಕುಂದುಕೊರತೆಗಳ ಅಧಿಕಾರಿಯನ್ನು ನೇಮಿಸಿದ್ದು ವೆಬ್‌ಸೈಟ್‌ನಲ್ಲಿ ಈ ಬಗ್ಗೆ ವಿವರಗಳನ್ನು ಹಂಚಿಕೊಂಡಿದೆ.
ಸರ್ಕಾರಿ ಮೂಲಗಳಿಂದ ದೊರೆತ ಮಾಹಿತಿಯ ಪ್ರಕಾರ ಗೂಗಲ್, ಫೇಸ್‌ಬುಕ್ ಮತ್ತು ವಾಟ್ಸ್‌ಆಪ್‌ನಂತಾ ಪ್ರಮುಖ ಕಂಪನಿಗಳು ಮಾಹಿತಿ ಸಚಿವಾಲಯಕ್ಕೆ ಹೊಸ ನಿಯಮಗಳ ಪ್ರಕಾರ ಅಗತ್ಯ ಮಾಹಿತಿಗಳನ್ನು ಹಂಚಿಕೊಂಡಿದೆ. ಆದರೆ ಟ್ವಿಟ್ಟರ್ ಈವರೆಗೂ ಇದನ್ನು ಪಾಲಿಸಿಲ್ಲ ಎನ್ನಲಾಗಿದೆ.
ಹೊಸ ನಿಯಮದ ಪ್ರಕಾರ ಭಾರತದಲ್ಲಿ 50 ಲಕ್ಷಕ್ಕಿಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಎಲ್ಲಾ ಸಾಮಾಜಿಕ ಜಾಲತಾಣಗಳು ಕುಂದುಕೊರತೆಗಳ ಅಧಿಕಾರಿ, ನೋಡಲ್ ಅಧಿಕಾರಿ ಮತ್ತು ಮುಖ್ಯಕಾಂಪ್ಲಿಯೆನ್ಸ್, ಅಧಿಕಾರಿಯನ್ನು ನೇಮಿಸಿಕೊಳ್ಳಬೇಕಿದೆ. ಈ ಸಿಬ್ಬಂದಿಗಳು ಭಾರತದಲ್ಲಿ ವಾಸಿಸಬೇಕೆಂದು ನಿಯಮದಲ್ಲಿದೆ.
ಫೇಸ್‌ಬುಕ್ ಮತ್ತು ವಾಟ್ಸ್‌ಆಪ್ ಈಗಾಗಲೇ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದೊಂದಿಗೆ ಈ ವಿವರಗಳನ್ನು ಸಲ್ಲಿಸಿತ್ತು. ಈಗ ಹೊಸದಾಗಿ ನೇಮಕ ಮಾಡಿರುವ ಅಧಿಕಾರಿಗಳ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಮಾಡಲಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿದೆ.
ಈಗ ಗೂಗಲ್ ಕೂಡ ಇದಕ್ಕೆ ಸ್ಪಂದನೆಯನ್ನು ನೀಡದೆ. ಗೂಗಲ್‌ನ 'ಕಾಂಟಾಕ್ಟ್ ಅಸ್' ಪೇಜ್‌ನಲ್ಲಿ ಜೋ ಗ್ರಿಯೆರ್ ಹೊಸ ಸಂಪರ್ಕ ಅಧಿಕಾರಿ ಎಂಬ ವಿವರಗಳನ್ನು ನೀಡಿದೆ. ಜೊತೆಗೆ ಇದೇ ಪೇಜ್‌ನಲ್ಲಿ ಯೂಟ್ಯೂಬ್‌ನ ಯೂಟ್ಯೂಬ್‌ನ ಕುಂದುಕೊರತೆಗಳ ಕಾರ್ಯವಿಧಾನದ ಮಾಹಿತಿಯನ್ನು ಕೂಡ ಒಳಗೊಂಡಿದೆ.
ಹೊಸ ನಿಯಮಗಳ ಪ್ರಕಾರ, ಸಾಮಾಜಿಕ ಮಾಧ್ಯಮ ಕಂಪನಿಗಳು ವರದಿ ಮಾಡಿದ ವಿಷಯಗಳನ್ನು 36 ಗಂಟೆಗಳಲ್ಲಿ ತೆಗೆದುಹಾಕಬೇಕಾಗುತ್ತದೆ. ನಗ್ನತೆ, ಅಶ್ಲೀಲತೆ ಇತ್ಯಾದಿ ವಿಚಾರಗಳಿಗೆ ರಿಪೋರ್ಟ್ ಮಾಡಿದ್ದರೆ ಅಂತಾ ಪೋಸ್ಟ್‌ಗಳನ್ನು 24 ಗಂಟೆಗಳ ಒಳಗೆ ತೆಗೆದುಹಾಕಬೇಕಾಗುತ್ತದೆ.