ಕೊಚ್ಚಿ: ರೋಶ್ ಫಾರ್ಮಾ ಸಂಸ್ಥೆಯ ಆಂಟಿಬಾಡಿ ಕಾಕ್ಟೈಲ್ ನ್ನು ಭಾರತದಲ್ಲಿ ತಕ್ಷಣದ ಬಳಕೆಗಾಗಿ ಕೇಂದ್ರ ಡ್ರಗ್ಸ್ ಸ್ಟ್ಯಾಂಡಡ್ರ್ಸ್ ಕಂಟ್ರೋಲ್ ಆರ್ಗನೈಸೇಶನ್ ಅನುಮೋದಿಸಿದೆ. ಕೋವಿಡ್ ಸೋಂಕಿತರಾಗಿ ಹೆಚ್ಚು ಅಪಾಯಕಾರಿ ಸ್ಥಿತಿಯಲ್ಲಿರುವ ರೋಗಿಗಳಿಗೆ ರೋಚೆಯ ಕ್ಯಾಸಿರಿವಿಮಾಬ್ ಮತ್ತು ಇಂಡಿವಿಮಾಬ್ ನ್ನು ಬಳಸಬಹುದಾಗಿದೆ. ಭಾರತದಾದ್ಯಂತ ವಿತರಣೆಗಾಗಿ ರೋಚೆಯು ಸಿಪ್ಲಾ ದೊಂದಿಗೆ ಪಾಲುದಾರಿಕೆ ಹೊಂದಿದೆ.
ಹೆಚ್ಚಿನ ಅಪಾಯದ ಪರಿಸ್ಥಿತಿಗಳನ್ನು ತಡೆಗಟ್ಟಲು 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಲ್ಲಿ (ಕನಿಷ್ಠ 40 ಕೆಜಿ ತೂಕವಿರುವವರು) ಕೊರೊನಾವೈರಸ್ ಕಾಯಿಲೆಯ ಚಿಕಿತ್ಸೆಗಾಗಿ ಪ್ರತಿಕಾಯ ಕಾಕ್ಟೈಲ್‍ಗಳನ್ನು ಶಿಫಾರಸು ಮಾಡಲಾಗಿದೆ. ರೋಗವು ಉಲ್ಬಣಗೊಳ್ಳದಂತೆ ತಡೆಯಲು ಇದು ಸಹಾಯ ಮಾಡುತ್ತದೆ.
ಮಾರ್ಚ್ 23 ರಂದು, ಹೆಚ್ಚಿನ ಅಪಾಯದ ಕೋವಿಡ್ -19 ಸೋಂಕಿತರಾಗಿದ್ದು ಹೊರರೋಗಿಗಳಾಗಿದ್ದವರ ಮೇಲೆ ನಡೆಸಿದ ಮೂರನೇ ಹಂತದ ಜಾಗತಿಕ ಪರೀಕ್ಷೆಯ ಯಶಸ್ಸನ್ನು ರೋಚೆ ಘೋಷಿಸಿತ್ತು.
ಪ್ಲಸೀಬೊಗೆ ಹೋಲಿಸಿದರೆ, ಕ್ಯಾಸಿರಿವಿಮಾಬ್ ಮತ್ತು ಇಂಡಿವಿಮಾಬ್ ಆಸ್ಪತ್ರೆಯ ಅಗತ್ಯ ಮತ್ತು ಸಾವಿನ ಸಾಧ್ಯತೆಯನ್ನು ಶೇಕಡಾ 70 ರಷ್ಟು ಕಡಿಮೆ ಮಾಡುತ್ತದೆ. ಮತ್ತು ರೋಗಲಕ್ಷಣಗಳ ಅವಧಿಯನ್ನು ನಾಲ್ಕು ದಿನಗಳವರೆಗೆ ಕಡಿಮೆಗೊಳಿದೆ.
ಭಾರತದಲ್ಲಿ ಕೋವಿಡ್ -19 ಸೋಂಕುಗಳ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ, ಆಸ್ಪತ್ರೆಯ ದಾಖಲಾತಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ಆರೋಗ್ಯ ವ್ಯವಸ್ಥೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ರೋಚೆ ಬದ್ಧವಾಗಿದೆ.
ಆಂಟಿಬಾಡಿ ಕಾಕ್ಟೈಲ್‍ಗಳಾದ ಕ್ಯಾಸಿರಿವಿಮಾಬ್ ಮತ್ತು ಇಂಡಿವಿಮಾಬ್ ನ್ನು ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಮತ್ತು ಅವರ ಸ್ಥಿತಿ ಹದಗೆಡುವ ಮೊದಲು ಹೆಚ್ಚಿನ ಅಪಾಯದ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಅವಲಂಬಿಸಬಹುದು. ಕಾಜಿರಿವಿಮಾಬ್ ಮತ್ತು ಇಂಡಿವಿಮಾಬ್‍ಗಳನ್ನು ಇಯುಎ ಅನುಮೋದಿಸಿದ್ದಕ್ಕಾಗಿ ಸಿಡಿಎಸ್‍ಕೊ ಗಮನ ಸೆಳೆದು ಸ್ತುತ್ಯರ್ಹವಾಯಿತು.
"ಕೋವಿಡ್ -19 ರ ಇಂತಹ ಹೊರರೋಗ ಚಿಕಿತ್ಸೆಯು ನಡೆಯುತ್ತಿರುವ ವ್ಯಾಕ್ಸಿನೇಷನ್ ಡ್ರೈವ್‍ಗೆ ಪೂರಕವಾಗಲಿದೆ ಮತ್ತು ಭಾರತದಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧದ ನಮ್ಮ ಹೋರಾಟವನ್ನು ಬೆಂಬಲಿಸುತ್ತದೆ" ಎಂದು ರೋಶ್ ಫಾರ್ಮಾ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್. ಸಿಂಪ್ಸನ್ ಎಮ್ಯಾನುಯೆಲ್ ಹೇಳಿದರು.
ಸಿಪ್ಲಾ ಭಾರತದಲ್ಲಿ ಉತ್ಪನ್ನವನ್ನು ಮಾರಾಟ ಮಾಡಿ ವಿತರಿಸಲಿದ್ದು, ದೇಶಾದ್ಯಂತ ವಿತರಣೆಯ ಬಲವನ್ನು ಹೆಚ್ಚಿಸುತ್ತದೆ. ಆಸ್ಪತ್ರೆಗಳು ಮತ್ತು ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ ಔಷಧಿ ಶೀಘ್ರ ಲಭ್ಯವಿರುತ್ತದೆ.