ತ್ರಿಶೂರ್: ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯಲು ಹಿಂದೇಟು ಹಾಕುವವರಿಗೆ ಇಲ್ಲೊಂದು ಯುವಕನ ಸಂದೇಶ ಎಚ್ಚರಿಕೆಯ ಕರೆಗಂಟೆಯಾಗಿದೆ. ಅನಾರೋಗ್ಯದಿಂದ ನಿನ್ನೆ ನಿಧನರಾದ ಕೊಡುಂಗಲ್ಲೂರ್ ಮೂಲದ ಕಣ್ಣನ್ ಅವರ ಮಾತುಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿವೆ. ಸಾಯುವ ಮುನ್ನ ಸ್ನೇಹಿತರಿಗೆ ಕಳುಹಿಸಿದ ಸಂದೇಶದಲ್ಲಿ ಕಣ್ಣನ್, ಯಾರೂ ಸ್ವಯಂ ಔಷಧಿಗಳನ್ನು ಆಶ್ರಯಿಸಬಾರದು ಎಂದು ಹೇಳಿರುವುದು ಗಮನಾರ್ಹವಾಗಿದೆ.
ಕಣ್ಣನ್ ಗೆ ಕಳೆದ ತಿಂಗಳು ಕೊರೋನ ಸೋಂಕು ದೃಢಪಡಿಸಲಾಗಿತ್ತು. ಆದರೆ ಯಾವುದೇ ಗಮನಾರ್ಹ ಚಿಕಿತ್ಸೆಯಿಲ್ಲದೆ, ರೋಗವು ಉಲ್ಬಣಗೊಂಡಿತು. ನಂತರ ಕಣ್ಣನ್ ತ್ರಿಶೂರ್‍ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದರು.ಎರಡು ವಾರಗಳ ನಂತರ, ಕಣ್ಣನ್ ನ್ಯುಮೋನಿಯಾಕ್ಕೆ ಒಳಗಾದರು. ಅವರ ಆರೋಗ್ಯ ಹದಗೆಟ್ಟು ಕೊನೆಗೆ ನಿನ್ನೆ ಇಹಲೋಕ ತ್ಯಜಿಸಿದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ, ಯಾರೂ ತನಗೆ ಚಿಕಿತ್ಸೆ ನೀಡಬಾರದು ಎಂದು ಕಣ್ಣನ್ ಧ್ವನಿ ಸಂದೇಶ ಕಳುಹಿಸಿದ್ದಾರೆ. ಕೊರೋನಾ ಶಂಕೆ ಕಂಡುಬಂದರೆ ತಕ್ಷಣವೇ ಪರೀಕ್ಷಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಪ್ಯಾರೆಸಿಟಮಾಲ್ ತೆಗೆದುಕೊಳ್ಳುವ ಮೂಲಕ ಕೊರೋನಾದಿಂದ ಬಚವಾಗಲು ಪ್ರಯತ್ನಿಸಬಾರದು ಎಂಬ ಸಂದೇಶ ಸೋಂಕಿನ ಗಂಭೀರತೆಯನ್ನು ಬಿಂಬಿಸಿದೆ.