ಸಮರಸ ಚಿತ್ರ ಸುದ್ದಿ: ಕೇರಳವನ್ನು ಬಾಧಿಸಿದ್ದ ನಿಫಾ ವೈರಸ್‍ಗೆ ಬಲಿಯಾದ ದಾದಿ ಲಿನಿ ಪುದುಶ್ಯೇರಿ ಅವರ ಸಂಸ್ಮರಣಾ ಸಮಾರಂಭ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಶನಿವಾರ ನಡೆಯಿತು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ಲಿನಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಡನೆಸಲಾಯಿತು. ಕೆಜಿಎನ್‍ಎ ಜಿಲ್ಲಾ ಸಮಿತಿ ಕಾರ್ಯದರ್ಶಿ ಪಿ.ವಿ ಅನೀಶ್, ಕೋಶಾಧಿಕಾರಿ ಪವಿತತ್ರನ್, ನರ್ಸಿಂಗ್ ಸುಪರಿಂಟೆಂಡೆಂಟ್ ಸ್ನಿಶಿ ಕೆ.ಪಿ ಉಪಸ್ಥಿತರಿದ್ದರು.