ಮಳೆಗಾಲದಲ್ಲಿ ಶೀತ, ಗಂಟಲು ಕೆರೆತ, ಕೆಮ್ಮು ಈ ರೀತಿಯ ಸಮಸ್ಯೆಗಳು ಕಂಡು ಬರುವುದು ಸಹಜ. ಇಂಥ ಸಮಸ್ಯೆ ಕಂಡು ಬಂದರೆ ಅದಕ್ಕೆ ಕಷಾಯ ಮಾಡಿ ಕುಡಿದರೆ ಆರಾಮ ಅನಿಸುವುದು. ಅಲ್ಲದೆ ಈ ರೀತಿಯ ಕಷಾಯ ಎರಡು ವರ್ಷದ ಮೇಲಿನ ಮಕ್ಕಳಿಗೂ ಮಾಡಿ ಕೊಡಬಹುದು. ಇನ್ನು ಕೆಮ್ಮು, ಶೀತ ಏನೂ ಇಲ್ಲದಿದ್ದರೂ ವಾರಕ್ಕೆ ಒಂದೆರಡು ಬಾರಿ ಈ ರೀತಿ ಕಷಾಯ ಮಾಡಿ ಕುಡಿದರೆ ದೇಹ ಬೆಚ್ಚಗೆ ಇರುತ್ತದೆ.
ಕಷಾಯವನ್ನು ಹಲವು ಬಗೆಯಲ್ಲಿ ಮಾಡಬಹುದು, ಇಲ್ಲಿ ತುಳಸಿ ಹಾಕಿ ಮಾಡುವ ಕಷಾಯ ರೆಸಿಪಿ ನೀಡಿದ್ದೇವೆ ನೋಡಿ.
ತುಳಸಿ ಕಷಾಯ ರೆಸಿಪಿ :
ಬೇಕಾಗುವ ಸಾಮಗ್ರಿ 2 ಕಪ್ ನೀರು 1 ತುಳಸಿ 1/2 ಚಮಚ ಕಾಳು ಮೆಣಸಿನ ಪುಡಿ 1 ಚಮಚ ಕಲ್ಲು ಸಕ್ಕರೆ (1 ತುಂಡು)
ಮಾಡುವುದು ಹೇಗೆ? :
ಈ ಕಷಾಯ ಮಾಡಲು ಬೇಕಾಗಿರುವ ಎಲ್ಲಾ ಸಾಮಗ್ರಿ ರೆಡಿಯಾಗಿ ಇಟ್ಟುಕೊಳ್ಳಿ. *ಈಗ ಪಾತ್ರೆಗೆ ತುಳಸಿ ಎಲೆ ಹಾಕಿ ಕುದಿಸಿ. * ತುಳಸಿ ಹಾಕಿದಾಗ ನೀರಿನ ಬಣ್ಣ ಬದಲಾದಾಗ ಅದಕ್ಕೆ ಶುಂಠಿ ಪುಡಿ (ಜಜ್ಜಿದ ಶುಂಠಿ), ಕಾಳು ಮೆಣಸಿನ ಪುಡಿ, ಕಲ್ಲು ಸಕ್ರೆ ಹಾಕಿ ಚೆನ್ನಾಗಿ ಕುದಿಸಿ. * ನಂತರ ಸೋಸಿ ಬಿಸಿ ಬಿಸಿ ಕಷಾಯ ಕುಡಿಯಿರಿ. ದಿನದಲ್ಲಿ ಮೂರು ಬಾರಿ ಈ ಕಷಾಯ ಕುಡಿದರೆ ಗಂಟಲು ಕೆರೆತ, ಕೆಮ್ಮು, ಶೀತ ಇವು ಕಡಿಮೆಯಾಗಿ ಆರಾಮ ಅನಿಸುವುದು.
INSTRUCTIONS ನೀವು ಬೇಕಿದ್ದರೆ ಈ ಕಷಾಯಕ್ಕೆ ಕಲ್ಲು ಸಕ್ಕರೆ ಬದಲಿಗೆ ಸ್ವಲ್ಪ ಜೇನು ಸೇರಿಸಿಯೂ ಕುಡಿಯಬಹುದು.
Read more at: https://kannada.boldsky.com/recipes/tulsi-kashayam-recipe-in-kannada/?story=1