ಜೋಧ್‌ಪುರ, (ರಾಜಸ್ಥಾನ): ಇಲ್ಲಿಯ ಜಲೋರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಸುಮಾರು 90 ಅಡಿಗಳಷ್ಟು ಆಳದ ಕೊಳವೆ ಬಾವಿಯೊಂದರಲ್ಲಿ ಸಿಲುಕಿದ್ದ ನಾಲ್ಕು ವರ್ಷದ ಬಾಲಕನನ್ನು 16 ಗಂಟೆಗಳ ಕಾರ್ಯಾಚರಣೆ ಬಳಿಕ ಶುಕ್ರವಾರ ರಕ್ಷಿಸಲಾಗಿದೆ.
ಅನಿಲ್ ದೇವಾಸಿ ಎಂಬ ಬಾಲಕ ಗುರುವಾರ ಆಟವಾಡುವಾಗ ಕೊಳವೆ ಬಾವಿಗೆ ಬಿದ್ದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.