ಕೊಟ್ಟಾಯಂ: ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ, ಉಮ್ಮನ್ ಚಾಂಡಿ ಅವರ ಪುತ್ರ ಚಾಂಡಿ ಉಮ್ಮನ್ ಅವರು ಶಬರಿಮಲೆ ಧರ್ಮಶಾಸ್ತಾರನ ಚಿತ್ರವನ್ನು ತಮ್ಮ ಫೇಸ್ಬುಕ್ ಪ್ರೊಫೈಲ್ ಚಿತ್ರಕ್ಕೆ ಅಳವಡಿಸಿದ್ದಾರೆ. ವಿಧಾನಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು ಯುಡಿಎಫ್ ಗೆ ಭಾರೀ ಹಿನ್ನಡೆ ತೋರಿಸಿದ್ದು, ಈ ಮಧ್ಯೆ ಚಾಂಡಿ ಉಮ್ಮನ್ ಅವರ ಪ್ರೊಪೈಲ್ ಚಿತ್ರಕ್ಕೆ ಬೆಂಬಲ ಮತ್ತು ಟೀಕೆಗೆ ಕಾರಣವಾಗಿದೆ.
ಏತನ್ಮಧ್ಯೆ, ಚಾಂಡಿ ಉಮ್ಮನ್ ತಮ್ಮ ಫೇಸ್ಬುಕ್ ಪ್ರೊಫೈಲ್ ಚಿತ್ರವನ್ನು ಬದಲಾಯಿಸಿದ್ದಾರೆ. ಚಾಂಡಿ ಉಮ್ಮನ್ ಕೊನೆಯದಾಗಿ ಕವರ್ ಇಮೇಜ್ ನ್ನು ನವೆಂಬರ್ 2019 ರಲ್ಲಿ ನವೀಕರಿಸಿದ್ದರು. ಯುಡಿಎಫ್ ಚುನಾವಣಾ ಪ್ರಚಾರದ ಸಮಯದಲ್ಲಿ, ಶಬರಿಮಲೆ ವಿಷಯವನ್ನು ಮುಖ್ಯ ಪ್ರಣಾಳಿಕೆಯ ಭಾಗವಾಗಿಸಿತ್ತು.
ಪ್ರಚಾರ ಸಂದರ್ಭದಲ್ಲಿ, ಎಲ್.ಡಿ.ಎಫ್ ಅಯ್ಯಪ್ಪನ ಕಣ್ಣಲ್ಲಿ ನೀರು ತರಿಸಿದ ಸರ್ಕಾರ ಎಂದು ಚಾಂಡಿ ಉಮ್ಮನ್ ಬಹಿರಂಗವಾಗಿ ಹೇಳಿದ್ದರು. ಆ ಸಮಯದಲ್ಲಿ ಯುಡಿಎಫ್ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಜನರನ್ನು ಒತ್ತಾಯಿಸುವ ಚಾಂಡಿ ಉಮ್ಮನ್ ಮಾಡಿದ ಭಾಷಣ ಭಕ್ತರ ಕಣ್ಣಲ್ಲಿ ನೀರು ತರಿಸಿತ್ತು ಎನ್ನಲಾಗಿದೆ.
ಏತನ್ಮಧ್ಯೆ, ಬರಹಗಾರ ಬೆಂಜಮಿನ್ ಅವರು ಚಾಂಡಿ ಉಮ್ಮನ್ ಅವರ ಪ್ರೊಪೈಲ್ ಚಿತ್ರದ ಬದಲಾವಣೆಯನ್ನು ಅಪಹಾಸ್ಯ ಮಾಡಿರುವರು. 'ಮನುಷ್ಯನು ಎಲ್ಲಾ ಭರವಸೆಯನ್ನು ಕಳಕೊಂಡಾಗ ದೇವರ ಮೇಲೆ ನಂಬಿಕೆ ಇಡುವುದು ಸಹಜ. ಅಯ್ಯಪ್ಪ. "ಈ ಆತ್ಮದೊಂದಿಗೆ ಬೆಂಬಲವಾಗಿರಿ" ಎಂದು ಪ್ರೊಫೈಲ್ ಚಿತ್ರದ ಸ್ಕ್ರೀನ್ ಶಾಟ್ ನ್ನು ಬೆಂಜಮಿನ್ ಹಂಚಿಕೊಂಡಿದ್ದಾರೆ.