ಕಾಸರಗೋಡು : ಕಾಸರಗೋಡು ಜಿಲ್ಲೆಯ ಪರಿಶಿಷ್ಟ ಜಾತಿಪಂಗಡ ಕಾಲನಿಗಳಲ್ಲಿ ಕೋವಿಡ್ ಹರಡುವಿಕೆ ನಿಯಂತ್ರಣ ನಡೆಸುವ ನಿಟ್ಟಿನಲ್ಲಿ ಪ್ರಬಲ ಕ್ರಮ ಕೈಗೊಳ್ಳಲು ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆ ತೀರ್ಮಾನಿಸಿದೆ.
ಆನ್ ಲೈನ್ ಮೂಲಕ ಜರುಗಿದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಆರೋಗ್ಯ, ಪರಿಶಿಷ್ಟ ಜಾತಿ ಕಲ್ಯಾಣ, ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆಗಳ ಜಿಲ್ಲಾ ಮಟ್ಟದ ಸಿಬ್ಬಂದಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವರು. ರೋಗಬಾಧಿತರಾದವರಿಗೆ ಮನೆಗಳಲ್ಲಿ ಸೌಕರ್ಯದ ಕೊರತೆಗಳಿದ್ದಲ್ಲಿ ಡೊಮಸಿಲರಿ ಕೇರ್ ಸೆಂಟರ್ ಗಳಲ್ಲಿ ಸೌಲಭ್ಯ ಒದಗಿಸಲಾಗುವುದು. ಪರಿಶಿಷ್ಟ ಜಾತಿ-ಪಂಗಡ ಪ್ರಮೋಟರ್ ಗಳು ಕಾಲನಿಗಳಲ್ಲಿ ರೋಗ ಹರಡುವಿಕೆ ಕಂಡುಬಂದಲ್ಲಿ ಮಾಹಿತಿ ಒದಗಿಸಬೇಕು ಎಂದು ಸಭೆ ತಿಳಿಸಿದೆ.
ಕಾಲನಿಗಳನ್ನು ಕೇಂದ್ರೀಕರಿಸಿ ಡಿ.ವೈಎಸ್.ಪಿ.ಗಳ ಮೇಲ್ನೋಟದಲ್ಲಿ ಠಿಔಲೀಸ್ ಪ್ರತ್ಯೇಕ ದಳ ಚಟುವಟಿಕೆ ಆರಂಭಿಸಿದೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಬಿ.ರಾಜೀವ್ ತಿಳಿಸಿದರು.
ಕಾಲನಿಗಳಲ್ಲಿ ಕೋವಿಡ್ ವಾಕ್ಸಿನೇಷನ್ ಚಟುವಟಿಕೆ ಚುರುಕುಗೊಳಿಸಲಾಗುವುದು. ಈ ನಿಟ್ಟಿನಲ್ಲಿ ನೋಂದಣಿ ತುರ್ತಾಗಿ ಪೂರ್ತಿಗೊಳಿಸಲು ಜಿಲ್ಲಾಧಿಕಾರಿ ಆದೇಶ ನೀಡಿದರು.
ಮೀನುಗಾರರಿಗೆ ಮತ್ತು ಇತರ ರಾಜ್ಯಗಳ ಕಾರ್ಮಿಕರಿಗೆ ಆಹಾರ ದಾನ್ಯಗಳ ಕಿಟ್ ವಿತರಣೆ ಪೂರ್ತಿಗೊಳಿಸಲಾಗುವುದು. ಹೈಯರ್ ಸೆಕೆಂಡರಿ ಪರೀಕ್ಷೆ ಮೌಲ್ಯಮಾಪನ ಹೊಣೆಯ ಶಿಕ್ಷಕರನ್ನು ಸೆಕ್ಟರಲ್ ಮೆಜಿಸ್ಟ್ರೇಟ್ ಕರ್ತವ್ಯದಿಂದ ಹೊರತುಪಡಿಸಲಾಗುವುದು ಎಂದು ಸಭೆ ತಿಳಿಸಿದೆ.
É್ಲಯಲ್ಲಿ ಟೆಸ್ಟ್ ಪಾಸಿಟಿವಿಟಿ ರೇಟ್ ಕಡಿಮೆಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಲಾಕ್ ಡೌನ್ ಆದೇಶಗಳನ್ನು ಪಾಲಿಸಬೇಕು ಎಂದು ಸಭೆ ವಿನಂತಿಸಿದೆ. ಸಭೆಯಲ್ಲಿ ಹೆಚ್ಚುವರಿ ದಂಡನಾಧಿಕಾರಿ ಅತುಲ್ ಸ್ವಾಮಿನಾಥ್, ಸಮಿತಿ ಸದಸ್ಯರು ಭಾಗವಹಿಸಿದ್ದರು.