ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ, ಒಂಬತ್ತು ದಿನಗಳವರೆಗೆ ಸಂಪೂರ್ಣ ಲಾಕ್ ಡೌನ್ ಜಾರಿಗೆ ಬಂದಿದೆ. ಇಂದಿನಿಂದ 16ರ ವರೆಗೆ ಅನಗತ್ಯವಾಗಿ ಹೊರಗೆ ತೆರಳÀಬಾರದು ಎಂದು ಸೂಚಿಸಲಾಗಿದೆ. ತುರ್ತು ಅಗತ್ಯಗಳಿಗೆ ತೆರಳಬೇಕಿದ್ದರೆ ಪೋಲೀಸ್ ಪಾಸ್ ಅಗತ್ಯವಿದೆ. ಅನಿವಾರ್ಯ ಸಂದರ್ಭಗಳಲ್ಲಿ, ಅಫಿಡವಿಟ್ ನ್ನು ಕೈಯಲಿರಿಸಬೇಕು.
1) ಯಾವಾಗ ಪ್ರಯಾಣ ಪಾಸ್ ಪಡೆಯಬಹುದು:
ಇಂದು ಸಂಜೆ ತುರ್ತು ಪಾಸ್ ನೀಡಲಾಗುವುದು.
2) ಪಾಸ್ ಗೆ ಎಲ್ಲಿ ಅರ್ಜಿ ಸಲ್ಲಿಸಬೇಕು?
ಜಿಲ್ಲಾ ಪೆÇಲೀಸ್ ಮುಖ್ಯಸ್ಥರ ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ಪಾಸ್ ನ್ನು ಮೊಬೈಲ್ ಅಥವಾ ಈ ಮೇಲ್ ಮೂಲಕ ಪಡೆಯಬಹುದು.
3) ಪಾಸ್ ಯಾರಿಗೆ ಸಿಗುತ್ತದೆ?
ಕೂಲಿ ಮತ್ತು ಇತರ ಕಾರ್ಮಿಕರಿಗೆ ಕೆಲಸಕ್ಕೆ ಹೋಗಲು ಪಾಸ್ ಸಿಗುತ್ತದೆ. ಕೆಲಸಗಾರ ಅಥವಾ ಉದ್ಯೋಗದಾತ ಅರ್ಜಿ ಸಲ್ಲಿಸಬೇಕು.
4) ಪಾಸ್ ಗೆ ಏನು ಬೇಕು?
ಪಾಸ್‍ಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವಾಗ ಪ್ರಯಾಣಿಕನ ಹೆಸರು, ಸ್ಥಳ ಮತ್ತು ಉದ್ದೇಶವನ್ನು ದಾಖಲಿಸಬೇಕು. ಇದನ್ನು ಪರಿಶೀಲಿಸಿದ ನಂತರ, ವಿಶೇಷ ಶಾಖೆಯು ಪ್ರಯಾಣ ಪರವಾನಗಿಯನ್ನು ನೀಡುತ್ತದೆ. ಅನುಮತಿ ಪಡೆದ ನಂತರ, ಒನ್ ಟೈಮ್ ಪಾಸ್‍ವರ್ಡ್ (ಒಟಿಪಿ) ನ್ನು ಅರ್ಜಿದಾರರ ಪೋನ್ ಗೆ ಕಳುಹಿಸಲಾಗುತ್ತದೆ ಮತ್ತು ಪೋನ್ ನಲ್ಲಿ ಪರವಾನಗಿ ಲಭ್ಯವಿರುತ್ತದೆ. ಇದು ಪ್ರಯಾಣಿಸಲಿರುವ ಏಕೈಕ ಮಾರ್ಗವಾಗಿದೆ.
5) ಸಾರ್ವಜನಿಕರು ಅರ್ಜಿ ಸಲ್ಲಿಸಬಹುದೇ?
ತುರ್ತು ಪ್ರಯಾಣದ ಅಗತ್ಯವಿರುವ ಸಾರ್ವಜನಿಕರು ಸಹ ಪಾಸ್ ಗೆ ಅರ್ಜಿ ಸಲ್ಲಿಸಬಹುದು. ಆದಾಗ್ಯೂ, ಸಾವು, ಆಸ್ಪತ್ರೆಗೆ ಸೇರಿಸುವುದು ಅಥವಾ ನಿಕಟ ಸಂಬಂಧಿಯ ವಿವಾಹದಂತಹ ಅನಿವಾರ್ಯ ಅಗತ್ಯಗಳಿಗಾಗಿ ಮಾತ್ರ ಪಾಸ್ ನೀಡಲಾಗುತ್ತದೆ.
6) ಪಾಸ್ ಇಲ್ಲದೆ ಪ್ರಯಾಣ ಅನುಮತಿ ಇರುವವರಿರುವರೇ?
ತುರ್ತು ಸೇವಾ ವಲಯಕ್ಕೆ ಸೇರಿದವರಿಗೆ ಪಾಸ್ ಅಗತ್ಯವಿಲ್ಲ ಮತ್ತು ಗುರುತಿನ ದಾಖಲೆಗಳನ್ನು ತೋರಿಸಿದರೆ ಸಾಕಾಗುತ್ತದೆ.