ಕೊಚ್ಚಿ: ಮಲೆಯಾಳದ ಖ್ಯಾತ ದೈನಿಕ 'ಮಾತೃಭೂಮಿ ನ್ಯೂಸ್'ನ ಮುಖ್ಯ ವರದಿಗಾರ ವಿಪಿನ್ ಚಂದ್ (42) ಅವರು ಕೋವಿಡ್ ಸಂಬಂಧಿತ ಸಮಸ್ಯೆಯಿಂದ ಭಾನುವಾರ ನಿಧನರಾದರು.
ವಿಪಿನ್ ಚಂದ್ ಅವರು ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲೂ ಕೆಲಸದಲ್ಲಿ ಸಕ್ರಿಯರಾಗಿದ್ದರು. ಎರಡು ವಾರಗಳ ಹಿಂದೆ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅªರು ಮನೆಯಲ್ಲೇ ಕ್ವಾರಂಟೈನ್ ನಲ್ಲಿದ್ದರು. ಆದರೆ ಬಳಿಕ ಸೋಂಕು ಉಲ್ಬಣಗೊಂಡಿದ್ದರಿಂದ ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ನಸುಕಿನ 2 ಗಂಟೆಗೆ ಅವರು ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು. ಎರ್ನಾಕುಳಂ ಅಲಂಗಡ್ ನಿವಾಸಿ ವಿಪಿನ್ ಚಂದ್ ಅವರು 2005 ರಲ್ಲಿ ಪತ್ರಿಕೋದ್ಯಮ ವೃತ್ತಿಯನ್ನು ಪ್ರಾರಂಭಿಸಿದ್ದರು. 2012ರಲ್ಲಿ 'ಮಾತೃಭೂಮಿ ನ್ಯೂಸ್' ಸೇರಿದ್ದರು. ಪತ್ನಿ, ಪುತ್ರ ಸಹಿತ ಬಂಧುಗಳನ್ನು ಅಗಲಿದ್ದಾರೆ.