ಕಾಸರಗೋಡು: ಆನಿವಾಸಿ ಉದ್ದಿಮೆ ಗುಂಪುಗಳಿಗೆ ಮಿನಿ ಡೈರಿ ಫಾಂ ಆರಂಭಕ್ಕೆ ಕಾಸರಗೋಡು ಜಿಲ್ಲಾ ಪಂಚಾಯತ್ ಅವಕಾಶ ಒದಗಿಸುತ್ತಿದೆ.
ಕೋವಿಡ್ ನಂತರದ ಅವಧಿಯಲ್ಲಿ ನೌಕರಿ ಕಳೆದುಕೊಮಡಿರುವ ಆನಿವಾಸಿಗಳ ಸಂರಕ್ಷಣೆ ಉದ್ದೇಶದಿಂದ ಜಿಲ್ಲಾ ಪಂಚಾಯತ್ ವಾರ್ಷಿಕ ಯೋಜನೆಯಲ್ಲಿ ಅಳವಡಿಸಿ ಆನಿವಾಸಿ ಉದ್ದಿಮೆ ಗುಂಪುಗಳಿಗೆ ಮಿನಿ ಡೈರಿ ಫಾಂ ಆರಂಭಿಸಲು ಯೋಜನೆ ಜಾರಿಗೊಳಿಸುತ್ತಿದೆ. ವಿದೇಶಗಳಿಂದ ಊರಿಗೆ ಮರಳಿರುವ ನೋಂದಣಿ ನಡೆಸಿರುವ ಉದ್ದಿಮೆ ಗುಂಪುಗಳು ಅರ್ಜಿ ಸಲ್ಲಿಸಬಹುದು. ಹಾಲು ಅಭಿವೃದ್ಧಿ ಇಲಾಖೆಯ ಆದೇಶ ಪ್ರಕಾರ ಈ ಯೋಜನೆ ಜಾರಿಯಾಗುತ್ತಿದೆ. ಜಿಲ್ಲೆಯ ಆಯ್ದ 4 ಗುಂಪುಗಳಿಗೆ ಆರ್ಥಿಕ ಸಹಾಯ ಒದಗಿಸಲಾಗುತ್ತದೆ. ಗುಂಪೆÇಂದಕ್ಕೆ ಗರಿಷ್ಠ 5 ಲಕ್ಷ ರೂ. ಮಂಜೂರುಗೊಳ್ಳಲಿದೆ. ಉಳಿದ ಮೊಬಲಗು ಫಲಾನುಭವಿಗಳು ಹೂಡಬೇಕು. ಹೆಚ್ಚಿನ ಮಾಹಿತಿಗಳಿಗೆ ಆಯಾ ಬ್ಲೋಕ್ ಪಂಚಾಯತ್ ಗಳ ಹಾಲು ಅಭಿವೃದ್ಧಿ ಘಟಕ ಯಾ ಜಿಲ್ಲಾ ಮಟ್ಟದಲ್ಲಿ ಕಾಸರಗೋಡು ಸಿವಿಲ್ ಸ್ಟೇಷನ್ ನಲ್ಲಿ ಚಟುವಟಿಕೆ ನಡೆಸುವ ಹಾಲು ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಬಹುದು. ಅರ್ಜಿಗಳನ್ನು ಮೇ 31ರ ಮುಂಚಿತವಾಗಿ ಹಾಲು ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.