ತಿರುವನಂತಪುರ: ಲಾಕ್ ಡೌನ್ ಸಮಯದಲ್ಲಿ ತುರ್ತು ಬಳಕೆ ಅಗತ್ಯವಿರುವಲ್ಲಿ ಔಷಧಿಗಳನ್ನು ಮನೆಮನೆಗಳಿಗೆ ತಲಪಿಸುವ ಕ್ರಮಗಳು ಲಭ್ಯವಿರಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿರುವರು. ಉಸಿರಾಟದ ಸಮಸ್ಯೆಗಳಿರುವವರಿಗೆ ಮತ್ತು ಇತರ ದೀರ್ಘಕಾಲಿಕ ಅನಾರೋಗ್ಯ ಪೀಡಿತರಾದವರಿಗೆ ಕ್ಲಿನಿಕ್ ಗಳು ಈಹಿಂದೆಯೇ ಇದೆ ಎಂದು ಹೇಳಿದರು.
ಅಗತ್ಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ-ಹೆಲ್ತ್ ವ್ಯವಸ್ಥೆ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಡೇಟಾಬೇಸ್‍ಗಳನ್ನು ರಚಿಸುತ್ತವೆ. ಭವಿಷ್ಯದಲ್ಲಿ ಕೋವಿಡ್ ಪರಿಸ್ಥಿತಿ ಪುನರಾವರ್ತಿಸಿದರೆ ಡೇಟಾಬೇಸ್ ಸಹ ಪ್ರಯೋಜ£ಕ್ಕೆ ಬರಲಿದೆ. ಐಸಿಯು ಮತ್ತು ವೆಂಟಿಲೇಟರ್ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಐಸಿಯು ಹಾಸಿಗೆಗಳು 1,200 ರಿಂದ 2,887 ಕ್ಕೆ ಏರಿಸಲಾಗಿದೆ ಎಮದವರು ಮಾಹಿತಿ ನೀಡಿರುವರು.
ಆಮ್ಲಜನಕ ಲಭ್ಯವಾಗುವಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಏನೇನು ಮಾಡಿದರೂ ಸೋಂಕು ಅನಿಯಂತ್ರಿತವಾದಲ್ಲಿ ಸಂಕಷ್ಟಗಳ ಸರಮಾಲೆ ತೊಡರಿಕೊಳ್ಳುತ್ತಿರುವುದು ಈಗಾಗಲೇ ಅಭಿವೃದ್ದಿಗೊಂಡ ಹಲವು ರಾಷ್ಟ್ರಗಳ ಕೋವಿಡ್ ಘಟನಾವಳಿಗಳಿಂದ ತಿಳಿಯಬಹುದಾಗಿದೆ. ಆದ್ದರಿಂದ ನಾವು ಪಾಠ ಕಲಿತಿದ್ದು, ನವೀನ ತಂತ್ರಜ್ಞಾನಗಳ ಅಳವಡಿಸುವಿಕೆಗೆ ಯತ್ನಿಸಲಾಗುತ್ತಿದೆ ಎಂದರು.
ಹೆಚ್ಚಿನ ರೋಗಿಗಳು ಮನೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಸೌಲಭ್ಯಗಳ ಕೊರತೆ ಇರುವವರಿಗೆ ಆಯಾ ಸ್ಥಳೀಯಾಡಳಿತ ಸಂಸ್ಥೆಗಳ ಕೇಂದ್ರಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆಗಳಿವೆ. ಇವೆಲ್ಲಗಳ ಮಧ್ಯೆ ಸೋಂಖಿತರ ಸಂಖ್ಯೆ ಬೆಳೆಯುತ್ತಿದೆ. ಕೋವಿಡ್ ಚಿಕಿತ್ಸೆಗೆ ಸೌಲಭ್ಯಗಳನ್ನು ಹೆಚ್ಚಿಸಲಾಗುವುದು. ಖಾಸಗಿ ಆಸ್ಪತ್ರೆಗಳ ಸಹಯೋಗದೊಂದಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲಾಗುವುದೆಂದು ಮುಖ್ಯಮಂತ್ರಿ ಹೇಳಿರುವರು.