HEALTH TIPS

ಕೋವಿಡ್ ಲಸಿಕಾ ಅಭಿಯಾನವನ್ನು ಬುಡಮೇಲುಗೊಳಿಸುವ ಸಂಚು ಕೇರಳದಲ್ಲಿ ನಡೆಯುತ್ತಿದೆ: ಯೋಜಿತ ತಂತ್ರಗಾರಿಕೆಯ ಅಭಿಯಾನವನ್ನು ಮುನ್ನಡೆಸಲು ಕೇಂದ್ರ ಸರ್ಕಾರ ಸಮರ್ಥ ಯೋಜನೆ ಹೊಂದಿದೆ: ಶೋಭಾ ಸುರೇಂದ್ರನ್

                                     

                  ತಿರುವನಂತಪುರ: ಕೋವಿಡ್ ಲಸಿಕೆಯ ಗೊಂದಲದ ಬಗ್ಗೆ ಕೇಂದ್ರ ಸರ್ಕಾರ ಅವಗಣನೆ ತೋರಿಸುತ್ತಿದೆ ಎಂದು ಯಾರಾದರೂ ಚಿಂತಿಸಿದರೆ ಅದು ತಪ್ಪು ಎಂದು ಬಿಜೆಪಿ ಮುಖಂಡೆ ಶೋಭಾ ಸುರೇಂದ್ರನ್ ಹೇಳಿದ್ದಾರೆ. ಇಂದಿನಿಂದ (ಮೇ 1) ಆರಂಭಗೊಳ್ಳುವ ಲಸಿಕೆ ಅಭಿಯಾನದ ಬಗ್ಗೆ ಅತ್ಯಂತ ದಾರಿತಪ್ಪಿಸುವ ವ್ಯವಸ್ಥೆ  ಕೇರಳದಲ್ಲಿ ನಡೆಯುತ್ತಿದೆ ಎಂದು ಶೋಭಾ ಸುರೇಂದ್ರನ್ ಹೇಳಿದ್ದಾರೆ.

           ಕೇಂದ್ರದ ಲಸಿಕಾ ಅಭಿಯಾನ್ ಸಾಮಾನ್ಯ ಕಾರ್ಯಚಟುವಟಿಕೆಯಲ್ಲ. ತಾತ್ಕಾಲಿಕವಾಗಿ ಕೆಲವು ವಿಧಾನಗಳನ್ನು ಅಳವಡಿಸಿಕೊಂಡಿದೆ. ಆದರೆ ಅದು ಕಾಲಾಕಾಲಕ್ಕೆ, ಗಂಭೀರತೆಗಳನ್ನು ಅನುಸರಿಸಿ ಬದಲಾವಣೆಗೊಳ್ಳುತ್ತದೆ. ಈ ತಂತ್ರವನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುವುದು ಎಂದು ಲಿಬರಲೈಸ್ಡ್ ಮತ್ತು ಆಕ್ಸಿಲರೇಟೆಡ್ ನ್ಯಾಷನಲ್ ಕೋವಿಡ್ -19 ವ್ಯಾಕ್ಸಿನೇಷನ್ ಸ್ಟ್ರಾಟಜಿಯ ಕೊನೆಯ ಭಾಗ ಹೇಳುತ್ತದೆ. ಆದಾಗ್ಯೂ, ಇಲ್ಲಿರುವ ಮೋದಿ ವಿರೋಧಿ ಅಂಶಗಳು ತಮಗಾಗಿ ವಿಷಯಗಳನ್ನು ಅರ್ಥೈಸುವವರನ್ನು ದಾರಿತಪ್ಪಿಸುತ್ತಿದೆ ಎಂದು ಶೋಭಾ ಸುರೇಂದ್ರನ್ ಹೇಳಿರುವರು.

                   ಭಾರತದ ಕೋವಿಡ್ -19 ವ್ಯಾಕ್ಸಿನೇಷನ್ ತಂತ್ರವು ವೈಜ್ಞಾನಿಕ ಮತ್ತು ತಾತ್ಕಾಲಿಕ ತಂತ್ರವಲ್ಲ ಎಂದು ಶೋಭಾ ಸುರೇಂದ್ರನ್ ಹೇಳಿದ್ದಾರೆ. ‘ದೇಶೀಯವಾಗಿ ಸಂಶೋಧನೆ, ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ಉತ್ತೇಜಿಸಿದ ನಂತರ ಕೇಂದ್ರ ಸರ್ಕಾರವು ನೋಟಕರಂತೆ ಸುಮ್ಮನೆ ನಿಲ್ಲುತ್ತದೆ ಎಂದು ಭಾವಿಸುವುದು ತಪ್ಪಾಗುತ್ತದೆ. ಲಸಿಕೆ ಬಳಕೆಯ ಪರಿಣಾಮಕಾರಿ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರವು ತನ್ನ ಜವಾಬ್ದಾರಿಯನ್ನು ಮರೆಯುವುದಿಲ್ಲ ಎಂದು ಶೋಭಾ ಸುರೇಂದ್ರನ್ ಹೇಳಿರುವರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries