ತ್ರಿಶೂರ್: 15 ನೇ ವಿಧಾನಸಭಾ ಚುನಾವಣೆಯ ಈವರೆಗಿನ ಫಲಿತಾಂಶಗಳ ಅನ್ವಯ ತ್ರಿಶೂರ್‍ನಲ್ಲಿ ಬಿಜೆಪಿ ಪ್ರಗತಿ ಸಾಧಿಸುತ್ತಿದೆ. ತ್ರಿಶೂರ್‍ನಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ ಮುನ್ನಡೆ 3 ಸಾವಿರ ಮತಗಳಿಂದ ಮುನ್ನಡೆ ಸಾಧಿಸುತ್ತಿದ್ದಾರೆ. ಇದಕ್ಕೂ ಮೊದಲು ಕಾಂಗ್ರೆಸ್ ಅಭ್ಯರ್ಥಿ ಪದ್ಮಜಾ ಅವರು ಅಂಚೆ ಮತಗಳಲ್ಲಿ ಮುನ್ನಡೆ ಸಾಧಿಸಿದ್ದರು.
ಆರಂಭಿಕ ಹಂತದಲ್ಲಿ ಬಿಜೆಪಿ ಪ್ರಬಲ ಹೋರಾಟವನ್ನು ಎದುರಿಸುತ್ತಿದೆ. ಸುರೇಶ್ ಗೋಪಿ ಅವರಲ್ಲದೆ, ನೇಮಂನಲ್ಲಿ ಕುಮ್ಮನಂ ರಾಜಶೇಖರನ್ ಮತ್ತು ಪಾಲಕ್ಕಾಡ್ ಇ.ಶ್ರೀಧರನ್ ಮತ್ತು ತಿರುವನಂತಪುರದಲ್ಲಿ ಕೃಷ್ಣಕುಮಾರ್ ಮುನ್ನಡೆ ಸಾಧಿಸುತ್ತಿದ್ದಾರೆ.