HEALTH TIPS

ಮುಂದಿನ ತಿಂಗಳೂ ಉಚಿತ ರೇಶನ್ ಕಿಟ್ ಗಳ ವಿತರಣೆ ಮುಂದುವರಿಯಲಿದೆ: ಸಿ.ಎಂ.

            ತಿರುವನಂತಪುರ: ಕೋವಿಡ್ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ವಿತರಿಸಲಾಗುವ ಉಚಿತ ರೇಶನ್ ಕಿಟ್ ಗಳ ವಿತರಣೆ ಮುಂದಿನ ತಿಂಗಳಲ್ಲೂ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿರುವರು. ಮುಖ್ಯಮಂತ್ರಿಯ ವಿಪತ್ತು ಪರಿಹಾರ ನಿಧಿ ಮತ್ತು ಆಹಾರ ಇಲಾಖೆಯ ಬಜೆಟ್ ಹಂಚಿಕೆಯನ್ನು ಬಳಸಿಕೊಂಡು ಆಹಾರ ಕಿಟ್‍ಗಳನ್ನು ವಿತರಿಸಲಾಗುವುದು. ಈ ತಿಂಗಳು ವಿತರಿಸಲಾಗುತ್ತಿದೆ ಎಂದರು. 

               ಎಲ್ಲಾ ಪಡಿತರ ಚೀಟಿ ಹೊಂದಿರುವವರಿಗೆ ಉಚಿತ ಅಕ್ಕಿ ವಿತರಣೆ ಈಗಾಗಲೇ ಲಾಕ್‍ಡೌನ್ ಹಂತದಲ್ಲಿ ನಡೆದಿದೆ. ಬಡವರಿಗೆ ಮನೆ-ಮನೆಗಳಿಗೆ ಆಹಾರ ಧಾನ್ಯಗಳನ್ನು ವಿತರಿಸಲಾಯಿತು.ಜೊತೆಗೆ ಅಗತ್ಯ ವಸ್ತುಗಳನ್ನು ಒಳಗೊಂಡಿರುವ ಆಹಾರ ಕಿಟ್‍ಗಳನ್ನು ಅತಿಥಿ ಕಾರ್ಮಿಕರಿಗೆ ವಿತರಿಸಲಾಗಿದೆ ಎಂದರು. 

          ಕಳೆದ ಬಾರಿ ಸರ್ಕಾರ ಜಾರಿಗೆ ತಂದ ಕೆಲವು ಜನಪ್ರಿಯ ಯೋಜನೆಗಳನ್ನು ಪುನರಾರಂಭಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಿಎಂ ಹೇಳಿರುವರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries