ಕಾಸರಗೋಡು: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ಮಂಗಳೂರು ವಿಭಾಗ ಇದರ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಮತ್ತು ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕು ಸಮಿತಿಗಳ ಘೋಷಣಾ ಕಾರ್ಯಕ್ರಮವು ಶನಿವಾರ ಸಂಜೆ ಆನ್ ಲೈನ್ ಮೂಲಕ ಗೂಗಲ್ ಮೀಟ್ ನಲ್ಲಿ ಜರಗಿತು.
ಅಭಾಸಾಪ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ಅವರು ನೂತನ ಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಘೋಷಿಸಿದರು. ಅಭಾಸಾಪ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಾಸಾಪ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹರಿಪ್ರಕಾಶ್ ಕೋಣೆಮನೆ, ಅಭಾಸಾಪ ಕರ್ನಾಟಕ ರಾಜ್ಯ ಕಾರ್ಯದರ್ಶಿ ಡಾ.ಮಾಧವ ಮೂಡುಕೊಣಾಜೆ, ಅಭಾಸಾಪ ಮಂಗಳೂರು ವಿಭಾಗ ಸಂಯೋಜಕ ಶೈಲೇಶ್ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು. ಜಗದೀಶ್ ಪ್ರತಾಪನಗರ ಸ್ವಾಗತಿಸಿ, ಡಾ.ರತ್ನಾಕರ ಮಲ್ಲಮೂಲೆ ವಂದಿಸಿದರು. ದಾಮೋದರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ನೂತನ ಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರ ವಿವರ ಈ ರೀತಿ ಇದೆ. ಕಾಸರಗೋಡು ಜಿಲ್ಲಾ ಸಮಿತಿಯ ಅಧ್ಯಕ್ಷರು: ಪಿ.ಎನ್.ಮೂಡಿತ್ತಾಯ, ಉಪಾಧ್ಯಕ್ಷರು: ಡಾ.ರತ್ನಾಕರ ಮಲ್ಲಮೂಲೆ, ವಿ.ಬಿ.ಕುಳಮರ್ವ, ಕಾರ್ಯದರ್ಶಿ: ದಾಮೋದರ ಶೆಟ್ಟಿ , ಕೋಶಾಧಿಕಾರಿ: ಗಣೇಶ್ ಭಟ್ ವಾರಣಾಸಿ, ಕಾರ್ಯಕಾರಿ ಸಮಿತಿಯ ಸದಸ್ಯರು: ಕೃಷ್ಣವೇಣಿ ಕಿದೂರು, ಹರೀಶ್ ಸುಲಾಯ, ಸ್ನೇಹಲತಾ ದಿವಾಕರ್ ಮತ್ತು ಕಾಸರಗೋಡು ತಾಲೂಕು ಸಮಿತಿಯ ಅಧ್ಯಕ್ಷರು: ಶಂನಾ ಅಡಿಗ ಕುಂಬಳೆ, ಕಾರ್ಯದರ್ಶಿ: ಲಕ್ಷ್ಮಣ ಅಡೂರು, ಕೋಶಾಧಿಕಾರಿ: ಶ್ರೀಶ ಪಂಜಿತ್ತಡ್ಕ ಹಾಗೂ ಮಂಜೇಶ್ವರ ತಾಲೂಕು ಸಮಿತಿಯ ಗೌರವಾಧ್ಯಕ್ಷರು: ಹರಿಕೃಷ್ಣ ಭರಣ್ಯ , ಅಧ್ಯಕ್ಷರು: ಪರಿಣಿತ ರವಿ ಎಡನಾಡು, ಉಪಾಧ್ಯಕ್ಷರು: ಸಂಧ್ಯಾಗೀತಾ ಬಾಯಾರು, ಕಾರ್ಯದರ್ಶಿ: ದಿವಾಕರ ಬಲ್ಲಾಳ್ ಎ.ಬಿ., ಜೊತೆ ಕಾರ್ಯದರ್ಶಿ: ಪ್ರಶಾಂತ್ ಹೊಳ್ಳ ಎನ್., ಕೋಶಾಧಿಕಾರಿ: ದಯಾನಂದ ರೈ ಕಳುವಾಜೆ, ಮಾಧ್ಯಮ ಪ್ರಮುಖ್: ಸುಬ್ರಹ್ಮಣ್ಯ ಪೆರಿಯಪ್ಪಾಡಿ, ಕಾರ್ಯಕಾರಿ ಸಮಿತಿಯ ಸದಸ್ಯರು: ನಾರಾಯಣ ಭಟ್ ಹಿಳ್ಳೆಮನೆ, ಡಾ.ಸೌಮ್ಯ ಪ್ರಸಾದ್ ಭಟ್, ಸೋಮನಾಥ ತೂಮಿನಾಡು, ಸ್ವಾತಿ ಕೆ.ವಿ. ಅವರನ್ನು ಆಯ್ಕೆ ಮಾಡಲಾಯಿತು.