ಕೋಝಿಕ್ಕೋಡ್: ಮಲಬಾರ್ ಪ್ರದೇಶದ ಹಾಲುತ್ಪಾದಕರಿಂದ ಮಿಲ್ಮಾ ಸಂಸ್ಥೆ ಹೆಚ್ಚಿನ ಹಾಲು ಸಂಗ್ರಹಿಸಲು ಯೋಜನೆ ರೂಪಿಸಿದೆ. ಮಿಲ್ಮಾ ಮಲಬಾರ್ ಪ್ರಾದೇಶಿಕ ಒಕ್ಕೂಟದ ಅಧ್ಯಕ್ಷ ಕೆ.ಎಸ್.ಮಣಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಕೆ. ಪಿ ಮುರಳಿ ಈ ಬಗ್ಗೆ ನಿನ್ನೆ ಸಮಗ್ರ ಮಾಹಿತಿ ನೀಡಿದರು.
ಲಾಕ್‍ಡೌನ್ ಹಿನ್ನೆಲೆಯಲ್ಲಿ ಹಾಲಿನ ಮಾರಾಟ ತೀವ್ರವಾಗಿ ಕುಸಿದು ಹಾಲಿನ ಉತ್ಪಾದನೆ ಗಗನಕ್ಕೇರಿರುವ ಸಮಯದಲ್ಲಿ ಈ ಬಿಕ್ಕಟ್ಟು ಸೃಷ್ಟಿಯಾಗಿದೆ. ಮಲಬಾರ್ ವಿಭಾಗದಲ್ಲಿ ದಿನಕ್ಕೆ ಮೂರು ಲಕ್ಷ ಲೀಟರ್ ಹಾಲಿನ ಹೆಚ್ಚುವರಿ ಸಂಗ್ರಹ ಹೊಂದಿತ್ತು.ನೆರೆಯ ರಾಜ್ಯಗಳಲ್ಲೂ ಲಾಕ್ ಡೌನ್ ಇರುವ ಕಾರಣ ಹೆಚ್ಚುವರಿ ಹಾಲನ್ನು ಹೊರ ರಾಜ್ಯಗಳಿಗೆ ಕಳುಹಿಸುವಲ್ಲಿ ಅಡೆತಡೆಗಳು ಎದುರಾಗಿದ್ದವು. ಇದರ ಬೆನ್ನಲ್ಲೇ ಮಿಲ್ಮಾ ಮಂಗಳವಾರದಿಂದ ರೈತರಿಂದ ಖರೀದಿಸುವ ಹಾಲಿನ ಪ್ರಮಾಣವನ್ನು ಶೇಕಡ 60 ಕ್ಕೆ ಇಳಿಸಿತ್ತು.
ಮಿಲ್ಮಾದ ಎಂ.ಡಿ ಬಿಕ್ಕಟ್ಟನ್ನು ಸಂಪೂರ್ಣವಾಗಿ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಉತ್ಪಾದನೆಯಾಗುವ ಶೇಕಡಾ 100 ರಷ್ಟು ಹಾಲನ್ನು ರೈತರಿಂದ ಸಂಗ್ರಹಿಸಬಹುದೆಂದು ಆಶಯ ವ್ಯಕ್ತಪಡಿಸಿರುವರು.