ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಕಾರ್ಯದರ್ಶಿಯಾಗಿ ಕೇರಳದ ಐಎಎಸ್ ಅಧಿಕಾರಿಯನ್ನು ನೇಮಿಸಲಾಗಿದೆ. ಕೊಟ್ಟಾಯಂ ನ ಪಾಲಾ ಪೂವರಾಣಿ ಮೂಲದ ಅನು ಜಾರ್ಜ್ ಅವರು ಹೊಸ ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಲಿದ್ದಾರೆ.
ಅನು ಜಾರ್ಜ್ ಪ್ರಸ್ತುತ ಚೆನ್ನೈನ ಹೆಚ್ಚುವರಿ ಕಾರ್ಯದರ್ಶಿ-ಪೆÇ್ರೀಟೋಕಾಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅನು ಮುಖ್ಯಮಂತ್ರಿಯ ಕಾರ್ಯದರ್ಶಿಯಾಗುವ ದೊಡ್ಡ ಜವಾಬ್ದಾರಿಯನ್ನು ವಹಿಸಿದ್ದಾರೆ. ಕೋವಿಡ್ ಸೇರಿದಂತೆ ಸಾಂಕ್ರಾಮಿಕ ಸೋಂಕಿನ ಸಂದರ್ಭ ಮುಖ್ಯಮಂತ್ರಿಗಳ ಕಾರ್ಯದರ್ಶಿ ಹುದ್ದೆ ಹೆಚ್ಚು ಜವಾಬ್ದಾರಿಯುತವಾಗಿದೆ.
ಅನು ಅವರು ತಿರುವನಂತಪುರ ಮಹಿಳಾ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಮತ್ತು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಜೆಎನ್‍ಯುನಿಂದ ಎಂಫಿಲ್ ಪಡೆದಿದ್ದಾರೆ. 2002 ರಲ್ಲಿ ಭಾರತೀಯ ಕಂದಾಯ ಸೇವೆಗೆ ಸೇರಿದ ಅನು 2003 ರಲ್ಲಿ ಐಎಎಸ್‍ನಲ್ಲಿ 25 ನೇ ಸ್ಥಾನ ಪಡೆದಿದ್ದರು.
ತಿರುಪತಿ ಮತ್ತು ಕಡಲೂರು ಜಿಲ್ಲೆಗಳಲ್ಲಿ ಸಹಾಯಕ ಕಲೆಕ್ಟರ್ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.