HEALTH TIPS

ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್‌ ಹೆಚ್ಚಳ: ನಿರ್ವಹಣೆಗೆ ಕೇಂದ್ರದಿಂದ ಮಾರ್ಗಸೂಚಿ

      ನವದೆಹಲಿ: ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್‌-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸೋಂಕು ಪ್ರಸರಣ ತಡೆಯುವ ಸಂಬಂಧ ಕೇಂದ್ರ ಸರ್ಕಾರ ಭಾನುವಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

     ಮಧುಮೇಹ, ಅಧಿಕ ರಕ್ತದೊತ್ತಡದಂತಹ ಇತರ ತೊಂದರೆಗಳಿರುವವರು ಲಕ್ಷಣ ರಹಿತ ಕೋವಿಡ್‌-19 ಪೀಡಿತರಾದವರಿಗೆ, ಸೌಮ್ಯ ಲಕ್ಷಣಗಳಿರುವವರಿಗೆ ಹೋಂ ಐಸೋಲೇಷನ್‌ಗೆ ಅವಕಾಶ ಇರದಿದ್ದರೆ, ಅಂಥವರಿಗಾಗಿ ಗ್ರಾಮೀಣ ಪ್ರದೇಶ, ಪಟ್ಟಣಗಳಲ್ಲಿ ಕನಿಷ್ಠ 30 ಹಾಸಿಗೆಗಳುಳ್ಳ ಕೋವಿಡ್‌ ಆರೈಕೆ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಸೂಚಿಸಿದೆ.

       ಎಲ್ಲ ಹಂತಗಳ ಆರೋಗ್ಯ ಕೇಂದ್ರಗಳಲ್ಲಿ ರ‍್ಯಾಪಿಡ್‌ ಆಯಂಟಿಜೆನ್‌ ಟೆಸ್ಟ್‌ ಕಿಟ್‌ಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಕೋವಿಡ್‌-19 ದೃಢಪಟ್ಟವರು ಹಾಗೂ ಶಂಕಿತ ವ್ಯಕ್ತಿಗಳನ್ನು ಒಂದೇ ಕಡೆ ದಾಖಲಿಸಿ, ಚಿಕಿತ್ಸೆ ನೀಡಬಾರದು ಎಂದೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

        ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ವವರನ್ನು ಸಾಧ್ಯವಾದಷ್ಟು ಪತ್ತೆ ಮಾಡಬೇಕು. ಕೋವಿಡ್‌-19 ದೃಢಪಟ್ಟವರಲ್ಲಿ ಆಮ್ಲಜನಕ ಮಟ್ಟದ ಮೇಲೆ ನಿಗಾ ಇಡುವುದು ಮುಖ್ಯ. ಹೀಗಾಗಿ ಪ್ರತಿಯೊಂದು ಗ್ರಾಮಕ್ಕೆ ಸಾಕಷ್ಟು ಸಂಖ್ಯೆಯ ಪಲ್ಸ್‌ ಆಕ್ಸಿಮೀಟರ್, ಉಷ್ಣತಾಮಾಪಕಗಳನ್ನು ಒದಗಿಸುವುದು ಅಗತ್ಯ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries