ಕಾಸರಗೋಡು: ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಲ್ಲಿ ಸೇರ್ಪಡೆಗೊಂಡ ರಾಜ್ಯದ ಮೊದಲ ರಬ್ಬರ್ ಕಿಂಡಿ ಅಣೆಕಟ್ಟು ನಿರ್ಮಾಣ ಸ್ಥಗಿತಗೊಂಡಿದೆ. ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಕಾಲಿಕ್ಕಡವು ಪದವಿನಿಂದ ಎಚ್ಚಿಕ್ಕುಳಂಗರೆಗೆ ತೆರಳಲು ಮಣಿಯಾಟ್ಟ್ ತೋಡಿಗೆ ನಿರ್ಮಾಣದ ಅಂತಿಮ ಹಂತದಲ್ಲಿದ್ದ ಅಣೆಕಟ್ಟು ಬಿಕ್ಕಟ್ಟಿಗೊಳಗಾಗಿದೆ. ಅಣೆಕಟ್ಟು ನಿರ್ಮಾಣದ ತಡೆಗೋಡೆಗಳ ಕಾಂಕ್ರೀಟ್ ಕೆಲಸದ ವೇಳೆ ಭಾರಿ ಮಳೆಯಿಂದಾಗಿ ಕಾಮಗಾರಿಗೆ ತೊಡಕಾಯಿತು. ಕಾಮಗಾರಿಗಾಗಿ ತಂದಿರಿಸಲಾಗಿದ್ದ ಹಲವು ಲೋಡ್ ಮಣ್ಣು ನೀರಿನಲ್ಲಿ ಕೊಚ್ಚಿಹೋಗಿವೆ. ಇದರೊಂದಿಗೆ, ಪ್ರತಿದಿನ ನೂರಾರು ಜನರು ಬಳಸುತ್ತಿರುವ ಹತ್ತಿರದ ಕಾಲುಸಂಕ ಅಪಾಯದಲ್ಲಿದೆ.ಯೋಜನೆಗೆ 26 ಲಕ್ಷ ಅನುದಾನ ಮಂಜೂರುಗೊಂಡಿದ್ದು ಇದೀಗ ಭಾರಿ ನಷ್ಟ ಅಂದಾಜಿಸಲಾಗಿದೆ.
ಭಾರಿ ಮಳೆಯಿಂದ ಮಣ್ಣು ಅಗೆತ ಮಾಡಿದ ಭಾಗ ಮತ್ತು ಸೇತುವೆಯ ಎರಡೂ ಬದಿಗಳಲ್ಲಿ ಇರಿಸಲಾದ ಕಂಗು ಮತ್ತು ತೆಂಗಿನ ಮರಮಟ್ಟುಗಳೂ ಮಳೆಗೆ ಕೊಚ್ಚಿಹೋಗಿವೆ. ಕಳೆದ ಮಾರ್ಚ್‍ನಲ್ಲಿ ನಿರ್ಮಾಣ ಪ್ರಾರಂಭವಾಗಿತ್ತು. ಅಧಿಕೃತರು ಕಾಮಗಾರಿಯನ್ನು ಈ ತಿಂಗಳು ಪೂರ್ಣಗೊಳಿಸುವ ಗುರಿಯನ್ನು ಹೊಂದಿದ್ದರು. ಇದೇ ವೇಳೆ, ಗುತ್ತಿಗೆದಾರರ ನಿರ್ಲಕ್ಷ್ಯವೇ ಅಣೆಕಟ್ಟು ಕೆಲಸ ವಿಳಂಬ ಮತ್ತು ಕಾಲುಸಂಕದ ಅಜೀರ್ಣಆವಸ್ಥೆಗೆ ಕಾರಣ ಎಂದು ಸ್ಥಳೀಯರು ಹೇಳುತ್ತಾರೆ.
ಕಿರು ನೀರಾವರಿ ಇಲಾಖೆಯ ನೇತೃತ್ವದಲ್ಲಿ ರಾಜ್ಯದ ಮೊದಲ ರಬ್ಬರ್ ಕಿಂಡಿ ಅಣೆಕಟ್ಟುಗಳಲ್ಲಿ ಒಂದನ್ನು ಇಲ್ಲಿ ಸ್ಥಾಪಿಸಲಾಗುತ್ತಿದೆ. ಕಳೆದ ವರ್ಷ ಕಾಸರಗೋಡು ಜಿಲ್ಲೆಯ ಐದು ಪ್ರದೇಶಗಳಲ್ಲಿ ಚೆಕ್ ಡ್ಯಾಮ್‍ಗಳನ್ನು ಮಂಜೂರು ಮಾಡಲಾಗಿತ್ತು. ಇದು ನೀರಿನ ನಿರ್ವಹಣೆ ಮತ್ತು ಪ್ರವಾಹ ತಡೆಗಟ್ಟುವಿಕೆಗೆ ಅಗ್ಗದ ಮತ್ತು ಸುಲಭವಾಗಿ ಪ್ರವೇಶಿಸಬಹುದಾದ ವ್ಯವಸ್ಥೆಯಾಗಿತ್ತು. ರಬ್ಬರ್ ಕಿಂಡಿ ಅಣೆಕಟ್ಟುಗಳು 1.5 ಮೀ ನಿಂದ 2.5 ಮೀ ಸಂಗ್ರಹದ ಎತ್ತರವನ್ನು ಹೊಂದಿವೆ. ದಕ್ಷಿಣ ಭಾರತದಲ್ಲಿ ಏಕೈಕವಾದ ಊಟಿಯಲ್ಲಿ ಮಾತ್ರ ನಿರ್ಮಿಸಲಾಗಿರುವ ರಬ್ಬರ್ ಕಿಂಡಿ ಅಣೆಕಟ್ಟು ಕ್ರಮವನ್ನು ಮೊದಲ ಬಾರಿಗೆ ಕಾಸರಗೋಡಲ್ಲಿ ಅಳವಡಿಸುವ ಮೂಲಕ ಜಿಲ್ಲೆಯ ನೀರಿನ ಕೊರತೆಯನ್ನು ನೀಗಿಸುವ ಲಕ್ಷ್ಯವಿರಿಸಲಾಗಿತ್ತು.