HEALTH TIPS

ರಾಜ್ಯದ ಲಾಕ್ ಡೌನ್ ನಿಯಂತ್ರಣಗಳಲ್ಲಿ ಒಂದಷ್ಟು ವಿನಾಯ್ತಿ: ಬಟ್ಟೆ -ಆಭರಣ ಅಂಗಡಿಗಳನ್ನು ತೆರೆಯಲು ಸೂಚನೆ

                                 

               ತಿರುವನಂತಪುರ: ರಾಜ್ಯದಲ್ಲಿ ಲಾಕ್ ಡೌನ್ ನಿಬಂಧನೆಗಳಲ್ಲಿ ಒಂದಷ್ಟು  ರಿಯಾಯಿತಿಗಳನ್ನು ಘೋಷಿಸಲಾಗಿದೆ. ಬಟ್ಟೆ ಮತ್ತು ಆಭರಣ ಮಳಿಗೆಗಳಿಗೆ ರಿಯಾಯಿತಿ ನೀಡಲಾಗಿದೆ.  ಆನ್‍ಲೈನ್ / ಮನೆ ವಿತರಣೆಗಳನ್ನು ಮಾಡಲು ಕೆಲವು ಉದ್ಯೋಗಿಗಳನ್ನು ನೇಮಿಸಿಕೊಳ್ಳಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ವಿವಾಹದ ಖರೀದಿಗಾಗಿ ಬಟ್ಟೆ ಅಂಗಡಿಗಳು ಮತ್ತು ಆಭರಣ ಮಳಿಗೆಗಳಿಗೆ ಬರುವವರು ಅಂಗಡಿಯಲ್ಲಿ ಒಂದು ಗಂಟೆ ಕಳೆಯಬಹುದು.


                  ಅನಾನಸ್ ತೋಟ ಕಾರ್ಮಿಕರಿಗೆ ರಿಯಾಯಿತಿಗಳನ್ನು ಘೋಷಿಸಲಾಗಿದೆ. ಕಟ್ಟಡ ಕಾರ್ಮಿಕರು ಮತ್ತು ಇಂತಹ ಇತರ ಉದ್ಯೋಗದಲ್ಲಿರುವವರಿಗೆ ಕೆಲಸದ ಉದ್ದೇಶಗಳಿಗಾಗಿ ಅನಾನಸ್ ತೋಟಕ್ಕೆ ತೆರಳಿ ಕೆಲಸ ನಿರ್ವಹಿಸಲು ಅನುಮತಿ ನೀಡಲಾಗಿದೆ. ಮೀನುಗಾರರಿಗೆ ಕಿಟ್ ವಿತರಣೆಗೆ ಸಹ ಅನುಮತಿ ಇದೆ. ಟೆಲಿಕಾಂ ಸೇವೆಗಳಿಗೆ ಸಂಬಂಧಿಸಿದ ಅಗತ್ಯ ಸೇವೆಗಳಿಗೆ ರಿಯಾಯಿತಿಗಳು ಲಭ್ಯವಿದೆ. ಟವರ್ ಸಂಬಂಧಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುಮತಿ ನೀಡಲಾಗಿದೆ.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries