ತಿರುವನಂತಪುರ: ಲಾಕ್‍ಡೌನ್ ನಿಂದ ಸೋಂಕು ಹರಡುವುದನ್ನು ಕಡಿಮೆ ಮಾಡಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದ್ದಾರೆ. ಸೋಂಕಿತರ ಸಂಖ್ಯೆ ನಿಧಾನವಾಗಿ ಕ್ಷೀಣಿಸುತ್ತಿದೆ. ಆದರೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಸಿಎಂ ಗಮನಸೆಳೆದರು. ಆಸ್ಪತ್ರೆಗಳಲ್ಲಿನ ದಟ್ಟಣೆ ಕಡಿಮೆ ಮಾಡಲು ಎರಡು ಮೂರು ವಾರಗಳು ಬೇಕಾಗುತ್ತದೆ ಎಂದು ಸಿಎಂ ಹೇಳಿದರು.
ಇದೇ ವೇಳೆ ಸಾವಿನ ಸಂಖ್ಯೆ ಕಡಿಮೆಯಾಗಲು ಮೂರು ವಾರಗಳವರೆಗೆ ಕಾಯಬೇಕಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ಮಲಪ್ಪುರಂನಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು. ಮಲಪ್ಪುರಂನಲ್ಲಿ ಸೋಂಕು ಮನೆಗಳಿಂದ ಹರಡುತ್ತದೆ. ಟ್ರಿಪಲ್ ಲಾಕ್‍ಡೌನ್ ನ್ನು ಉಲ್ಲಂಘಿಸುವವರ ಮೇಲೆ ಪ್ರತಿಜನಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ಮನೆಯಿಂದ ಅನಗತ್ಯ ಹೊರತೆರಳುವವರ ವಿರುದ್ಧ ಪೋಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ಸಿಎಂ ಹೇಳಿದರು.ಲಾಕ್‍ಡೌನ್ ನಿಂದ ಸೋಂಕು ಹರಡುವುದನ್ನು ನಿಯಂತ್ರಿಸಲಾಗಿದೆ: ಸಾವಿನ ಸಂಖ್ಯೆಯ ಇಳಿಮುಖಕ್ಕೆ ಮೂರು ವಾರಗಳವರೆಗೆ ಕಾಯಬೇಕು: ಮುಖ್ಯಮಂತ್ರಿ
0
ಮೇ 24, 2021
Tags