ಪಾಲಕ್ಕಾಡ್: ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಗಮನಾರ್ಹವಾದ ಹೋರಾಟ ನಡೆದ ಕ್ಷೇತ್ರಗಳಲ್ಲಿ ಪಾಲಕ್ಕಾಡ್ ಕೂಡಾ ಒಂದು. ಬಿಜೆಪಿ ಅಭ್ಯರ್ಥಿ ಮೆಟ್ರೊ ಮ್ಯಾನ್ ಇ ಶ್ರೀಧರನ್ ಅವರು ಮತ ಎಣಿಕೆ ಆರಂಭದಿಂದ ಕೊನೆಯ ಗಂಟೆಗಳವರೆಗೆ ಮುನ್ನಡೆ ಸಾಧಿಸಿದ್ದರು. ಕೊನೆಯ ನಿಮಿಷದ ಫೆÇೀಟೋ ಫಿನಿಶ್‍ನಲ್ಲಿ ಯುಡಿಎಫ್ ಅಭ್ಯರ್ಥಿ ಶಾಫಿ ಪರಂಪಿಲ್ ಜಯಗಳಿಸಿದ್ದಾರೆ.
ಶಾಫಿ ಪರಂಪಿಲ್ 3,840 ಮತಗಳ ಬಹುಮತದೊಂದಿಗೆ ಜಯಗಳಿಸಿದರು. ಗ್ರಾಮೀಣ ಪ್ರದೇಶದ ಮತಗಳಿಂದ ಶಾಫಿ ಈ ಗೆಲುವು ದಾಖಲಿಸಿದರು.
ರಾಜ್ಯದ ಹೆಚ್ಚಿನ ಕ್ಷೇತ್ರಗಳಿಗಿಂತ ಬಿಜೆಪಿಗೆ ದೊಡ್ಡ ಮುನ್ನಡೆ ಇದ್ದ ಪಾಲಕ್ಕಾಡ್ ಕ್ಷೇತ್ರದಲ್ಲಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎರಡನೇ ಸ್ಥಾನದಲ್ಲಿತ್ತು.
ಕಾಂಗ್ರೆಸ್ ಶಾಸಕರಾದ ಶಾಫಿ ಪರಂಬಿಲ್ ಅವರು ಕ್ಷೇತ್ರದ ಕೊನೆಯ ಎರಡು ಮತಗಟ್ಟೆಗಳ ಮತಗಳಿಂದ ಗೆದ್ದಿದ್ದಾರೆ, ಇದನ್ನು ಜಿಲ್ಲೆಯ ಯುಡಿಎಫ್‍ನ ಭದ್ರಕೋಟೆ ಎಂದು ಬಣ್ಣಿಸಬಹುದು. ಶಾಫಿ 2006 ರಲ್ಲಿ ಸಿಪಿಎಂ ಅಭ್ಯರ್ಥಿ ಕೆ.ಕೆ.ದಿವಾಕರನ್ ಅವರನ್ನು ಪರಾಭವಗೊಳಿಸಿದ್ದರು. ಸಿಪಿಎಂ ಅಭ್ಯರ್ಥಿಗಳು ಸ್ಪರ್ಧಿಸಿ ಗೆದ್ದಿದ್ದು 1967, 1970 ಮತ್ತು 1996 ರ ಚುನಾವಣೆಗಳಲ್ಲಿ ಮಾತ್ರ.
2016 ರಲ್ಲಿ ಶಾಫಿಯ ಎದುರಾಳಿಯು ಪ್ರಬಲ ಬಿಜೆಪಿ ಅಭ್ಯರ್ಥಿ ಶೋಭಾ ಸುರೇಂದ್ರನ್ ಆಗಿದ್ದರು. ಆ ಸಮಯದಲ್ಲಿ, ಶೋಭಾ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. ಶಾಫಿ ಪರಂಬಿಲ್ ಅವರು 17,000 ಕ್ಕೂ ಹೆಚ್ಚು ಮತಗಳಿಂದ ಜಯಗಳಿಸಿದ್ದರು. ಶೋಭಾ ಸುರೇಂದ್ರನ್ ಸುಮಾರು 40,000 ಮತಗಳನ್ನು ಪಡೆದಿದ್ದರು. ಆದರೆ ಈ ಬಾರಿ ಶಾಫಿಗೆ ಕೇವಲ 3,000 ಮತಗಳ ಬಹುಮತವಷ್ಟೇ ಸಿಕ್ಕಿದೆ ಎನ್ನುವುದೂ ಗಮನಾರ್ಹ.