ತಿರುವನಂತಪುರ: ರಾಜ್ಯದಲ್ಲಿ ಲಾಕ್‍ಡೌನ್ ನಿರ್ಬಂಧಗಳು ಮುಂದುವರಿಯುತ್ತಿರುವುದರಿಂದ ಜಿಲ್ಲೆ-ಜಿಲ್ಲೆಗಳ ಪ್ರಯಾಣಕ್ಕೆ ನಿಬಂಧನೆಗಳು ಮುಂದುವರಿಯಲಿವೆ ಎಂದು ಡಿಜಿಪಿ ಲೋಕನಾಥ ಬೆಹ್ರಾ ಹೇಳಿರುವರು.
ತುರ್ತು ಅಗತ್ಯಗಳನ್ನು ಹೊರತುಪಡಿಸಿ ಜಿಲ್ಲೆಯ ಹೊರಗಿನ ಪ್ರಯಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಡಿಜಿಪಿ ಮಾಹಿತಿ ನೀಡಿದರು. ಪ್ರಯಾಣವನ್ನು ನಿರ್ಬಂಧಿಸುವಂತೆ ಜಿಲ್ಲಾ ಪೋಲೀಸ್ ಮುಖ್ಯಸ್ಥರಿಗೆ ಡಿಜಿಪಿ ನಿರ್ದೇಶನ ನೀಡಿದರು.
ಪರೀಕ್ಷೆಗಳು, ಚಿಕಿತ್ಸೆ ಮತ್ತು ಮರಣೋತ್ತರ ಸಮಾರಂಭಗಳಿಗೆ ಜಿಲ್ಲೆಯ ಹೊರಗಿನ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು. ಹೊಸ ಉದ್ಯೋಗಕ್ಕೆ ಸೇರಲು ಪ್ರಯಾಣಿಸಬಹುದು. ಪ್ರಯಾಣಿಕರು ತಮ್ಮ ಅಫಿಡವಿಟ್ ಮತ್ತು ಗುರುತಿನ ಚೀಟಿ ತರಬೇಕು ಎಂದು ಡಿಜಿಪಿ ತಿಳಿಸಿದ್ದಾರೆ.
ಲಾಕ್‍ಡೌನ್ ವಿನಾಯಿತಿಯ ಭಾಗವಾಗಿ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಡ್ಡಾಯವಾಗಿದೆ. ಸಾಮಾಜಿಕ ದೂರವನ್ನು ಕಾಯ್ದುಕೊಳ್ಳದಿದ್ದರೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿರುವರು.