ಪತ್ತನಂತಿಟ್ಟು: ಇಡವ ಮಾಸ ಪೂಜೆಗಳಿಗಾಗಿ ಶಬರಿಮಲೆ ಸನ್ನಿಧಿ ಬಾಗಿಲು ಇಂದು ತೆರೆಯಲಾಗುವುದು. ಸಂಜೆ 5 ಗಂಟೆಗೆ ಬಾಗಿಲು ತೆರೆಯಲಿದ್ದು ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ಭಕ್ತರಿಗೆ ಈ ಬಾರಿ ಶಬರಿಮಲೆ ಪ್ರವೇಶಿಸಲು ಆಸ್ಪದ ನೀಡಲಾಗಿಲ್ಲ.
ಕ್ಷೇತ್ರ ಬಾಗಿಲು ತೆರೆದಿರುವ ದಿನಗಳಲ್ಲಿ ನಿಯಮಿತ ಪೂಜೆಗಳು ಮಾತ್ರ ಇರುತ್ತವೆ. ಮೇ.19 ರ ರಾತ್ರಿ ಹರಿವರಾಸನ ಹಾಡಲಾಗುವುದು ಮತ್ತು ದೇವಾಲಯದ ಬಾಗಿಲು ಮುಚ್ಚಲಾಗುವುದು. ಸಮರ್ಪಣಾ ವಾರ್ಷಿಕೋತ್ಸವಕ್ಕಾಗಿ ಮೇ 22 ರ ಸಂಜೆ ದೇವಾಲಯದ ನಡೆ ಮತ್ತೆ ತೆರೆದುಕೊಳ್ಳಲಿದೆ.