ತಿರುವನಂತಪುರ: ಕೇರಳದಲ್ಲಿ ಕಪ್ಪು ಶಿಲೀಂಧ್ರ (ಮ್ಯೂಕಾರ್ಮೈಕೋಸಿಸ್) ರೋಗನಿರ್ಣಯ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈವರೆಗೆ ರಾಜ್ಯದಲ್ಲಿ 44 ಪ್ರಕರಣಗಳು ದೃಢಪಟ್ಟಿದೆ. ಮಲಪ್ಪುರಂನಲ್ಲಿ ಅತಿ ಹೆಚ್ಚು ರೋಗಿಗಳಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 11 ಜನರಿಗೆ ಈ ರೋಗ ಪತ್ತೆಯಾಗಿದೆ.
ರಾಜ್ಯದಲ್ಲಿ ಈವರೆಗೆ ಒಂಬತ್ತು ಜನರು ಕಪ್ಪು ಶಿಲೀಂಧ್ರದಿಂದ ಸಾವನ್ನಪ್ಪಿದ್ದಾರೆ. ನಿನ್ನೆಯೊಂದೇ ದಿನ ರಾಜ್ಯದಲ್ಲಿ ನಾಲ್ಕು ಜನರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಎರ್ನಾಕುಲಳಂ ನಿವಾಸಿಗಳು ಮತ್ತು ಇಬ್ಬರು ಪತ್ತನಂತಿಟ್ಟು ನಿವಾಸಿಗಳು ಮೃತಪಟ್ಟರು. ತಿರುವನಂತಪುರ ಮತ್ತು ಕೊಟ್ಟಾಯಂಗಳಲ್ಲಿ ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಕೇಂದ್ರ ಸರ್ಕಾರದ ಪ್ರಕಾರ ಕೇರಳದಲ್ಲಿ 36 ಪ್ರಕರಣಗಳು ದೃಢಪÀಟ್ಟಿದೆ.
ಏತನ್ಮಧ್ಯೆ, ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ರಾಜ್ಯದಲ್ಲಿ ಕಪ್ಪು ಶಿಲೀಂಧ್ರದಿಂದ ಸಾವಿನ ಪ್ರಮಾಣ ಕಡಿಮೆ ಇದೆ ಎಂದು ಹೇಳಿದ್ದಾರೆ. ಕೊರೋನದ ಸಂದರ್ಭದಲ್ಲಿ, ಕಪ್ಪು ಶಿಲೀಂಧ್ರವನ್ನು ಪತ್ತೆಹಚ್ಚುವುದು ಅಪಾಯಕಾರಿಯೂ ಹೌದು. ರಾಜ್ಯದಲ್ಲಿ ಗರಿಷ್ಠ ಜಾಗರೂಕತೆಯಿಂದಿದ್ದು, ಕಳವಳಕ್ಕೆ ಯಾವುದೇ ಕಾರಣವಿಲ್ಲ ಎಂದು ವೀಣಾ ಜಾರ್ಜ್ ಹೇಳಿದ್ದಾರೆ.
ದೇಶದ 18 ರಾಜ್ಯಗಳಲ್ಲಿ ಕಪ್ಪು ಶಿಲೀಂಧ್ರ ದೃಢಪಡಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಹೇಳಿದ್ದಾರೆ. ಕೊರೋನಾ ದೃಢೀಕರಿಸದವರಲ್ಲಿ ಶಿಲೀಂಧ್ರಗಳ ಸೋಂಕು ಸಹ ಕಂಡುಬಂದಿದೆ. ಈವರೆಗೆ ವಿವಿಧ ರಾಜ್ಯಗಳಲ್ಲಿ 5424 ಮಂದಿ ಜನರಿಗೆ ಈ ರೋಗ ಪತ್ತೆಯಾಗಿದೆ. ಈ ರೋಗನಿರ್ಣಯ ಮಾಡಿದವರಲ್ಲಿ 55 ಪ್ರತಿಶತ ಮಧುಮೇಹಿಗಳು ಎಂದು ಕೇಂದ್ರ ಸಚಿವರು ಬೊಟ್ಟುಮಾಡಿದ್ದಾರೆ.