ತ್ರಿಶೂರ್: ಗುರುವಾಯೂರ್ ದೇವಸ್ಥಾನದಲ್ಲಿ ಯಾವುದೇ ವಿವಾಹ ಸಮಾರಂಭಗಳು ಲಾಕ್ ಡೌನ್ ಅವಧಿಯಲ್ಲಿ ನಡೆಯುವುದಿಲ್ಲ ಎಂದು ದೇವಸ್ವಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೊರೋನದ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಲಾಕ್‍ಡೌನ್ ಘೋಷಣೆಯಾಗಿರುವುದರಿಂದ ಈ ನಿರ್ಧಾರ ತಳೆಯಲಾಗಿದೆ. ಇಂದು ಕಾಯ್ದಿರಿಸಿದ ವಿವಾಹಗಳು ಮಾತ್ರ ನಡೆಯುತ್ತವೆ.
ರಾಜ್ಯದಲ್ಲಿ ವಿಧಿಸಲಾಗಿರುವ ಲಾಕ್‍ಡೌನ್ ನಿರ್ಬಂಧದ ಭಾಗವಾಗಿ ಭಕ್ತರಿಗೆ ದೇವಾಲಯಕ್ಕೆ ಭೇಟಿ ನೀಡಲು ಅವಕಾಶವಿಲ್ಲ. ಕೊರೋನಾ ವಿಸ್ತರಣೆಯ ಹಿನ್ನೆಲೆಯಲ್ಲಿ ಗುರುವಾಯೂರ್ ದೇವಾಲಯವು ಈ ಹಿಂದೆ ಕಠಿಣ ನಿಬರ್ಂಧಗಳನ್ನು ವಿಧಿಸಿತ್ತು. ದೇವಾಲಯಕ್ಕೆ ಭೇಟಿ ನೀಡಲು ಆನ್‍ಲೈನ್‍ನಲ್ಲಿ ಕಾಯ್ದಿರಿಸಿದವರಿಗೆ ಮಾತ್ರ ಪ್ರವೇಶಿಸಲು ಅವಕಾಶವಿತ್ತು.