ತಿರುವನಂತಪುರ: ಕೋವಿಡ್ ಸೋಂಕು ಸ್ಫೋಟಗೊಂಡ ಹಿನ್ನೆಲೆಯಲ್ಲಿ, ಲಸಿಕೆ ಆದ್ಯತೆಯ ವಿಭಾಗದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ರಾಜ್ಯ ಅಂಚೆ ಇಲಾಖೆಯ ನೌಕರರನ್ನು ಸೇರಿಸುವ ಅವಶ್ಯಕತೆಯಿದೆ. ಅಂಚೆ ನೌಕರರನ್ನು ಮುಂಚೂಣಿ ಹೋರಾಟಗಾರರೆಂದು ಪರಿಗಣಿಸಬೇಕು ಎಂಬ ಬೇಡಿಕೆ ಕೇಳಿಬಂದಿದೆ.
ಸಾಂಕ್ರಾಮಿಕ ರೋಗÀದ ಈ ಕಾಲಘಟ್ಟದಲಲಿ ವಿವಿಧ ಪತ್ರಗಳು, ಹಣದ ಆದೇಶಗಳು ಮತ್ತು ಸಾಮಾಜಿಕ ಭದ್ರತಾ ಪಿಂಚಣಿಗಳ ವಿತರಣೆಯನ್ನು ಖಾತ್ರಿಪಡಿಸುವ ಪೋಸ್ಟ್‍ಮ್ಯಾನ್ ಸೇರಿದಂತೆ ನೌಕರರು ರೋಗದ ಭೀತಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಅಂಚೆ ನೌಕರರಿಗೆ ವ್ಯಾಕ್ಸಿನ್ ಆದ್ಯತೆ ನೀಡಬೇಕೆಂಬ ಬೇಡಿಕೆ ಬಲಗೊಂಡಿದೆ.
ಸಂಪರ್ಕದಿಂದಾಗಿ ಸೋಂಕಿಗೊಳಗೊಂಡು ಕೋವಿಡ್‍ನಿಂದ ನಿಧನರಾದ ಕೆಲವು ನೌಕರರ ಕುಟುಂಬಗಳಿಗೆ ಭದ್ರತೆ, ನೆರವು ಕ್ರಮ ಕೈಗೊಳ್ಳುವಂತೆ ಎರ್ನಾಕುಳಂ ಜಿಲ್ಲೆ ಸೇರಿದಂತೆ ವಿವಿಧ ಪ್ರಾದೇಶಿಕ ಒಕ್ಕೂಟಗಳು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ.