ಕೊಚ್ಚಿ: ಕೇರಳೀಯ ಮಹಿಳೆ ಜೆನ್ನಿ ಜೆರೋಮ್ ಕೊನೆಗೂ ತನ್ನ ಜೀವನದ ಪರಮೋನ್ನತ ಕನಸನ್ನು ನನಸಾಗಿಸುವ ಮೂಲಕ ಹಲವು ಟೀಕೆ ಮತ್ತು ಅಪಹಾಸ್ಯಗಳಿಗೆ ಇತಿಶ್ರೀ ಹಾಡಿದ್ದಾರೆ. ನಿನ್ನೆ ರಾತ್ರಿ 10.25 ಕ್ಕೆ ಶಾರ್ಜಾದಿಂದ ತಿರುವನಂತಪುರಕ್ಕೆ ಆಗಮಿಸಿದ ಏರ್ ಅರೇಬಿಯಾ ವಿಮಾನ ಅರೇಬಿಯನ್ ಸಮುದ್ರದ ಮೇಲ್ಬದಿ ಹಾರಿ ಗಮ್ಯಸ್ಥಾನ ತಲಪಿದ್ದು, ಈ ಮೂಲಕ ರಾಜ್ಯ ಅಭಿಮಾನದೊಂದಿಗೆ ದೊಡ್ಡ ನಿಟ್ಟುಸಿರೊಂದನ್ನು ಬಿಟ್ಟಿದೆ. ಕಾರಣ, ಆ ವಿಮಾನದ ಪೈಲಟ್ ಆಗಿದ್ದವರು ಜೆನ್ನಿ ಜೆರೋಮ್. ಈ ಮೂಲಕ ಇನ್ನು ಕೇರಳದ ಮಹಿಳಾ ವಾಣಿಜ್ಯ ಪೈಲಟ್‍ಗಳಲ್ಲಿ ಜೆನ್ನಿ ಒಬ್ಬರಾದರು.
ಶಾರ್ಜಾ ಏವಿಯೇಷನ್ ಅಕಾಡೆಮಿಯ ಪದವೀಧರರಾದ ಜೆನ್ನಿ ನಿನ್ನೆ ತಿರುವನಂತಪುರದಲ್ಲಿ ಏರ್ ಅರೇಬಿಯಾ ಸಹ ಪೈಲಟ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಲಿದ್ದಾರೆ. ಜೆನ್ನಿ ಕರುಮ್ಕುಲಂನ ಕೊಚುತುರಾ ಮೂಲದ ಜೆರೋಮ್ ಜೋರಿಸ್ ಅವರ ಪುತ್ರಿ. ಎಂಟನೇ ತರಗತಿಯಿಂದ ಪೈಲಟ್ ಆಗಬೇಕೆಂಬ ಆಕಾಂಕ್ಷೆಗೆ ಆಕೆಯ ತಂದೆ ಬೆನ್ನೆಲುಬಾಗಿದ್ದರು.ಎರಡು ವರ್ಷಗಳ ಹಿಂದೆ ತರಬೇತಿಯ ಸಮಯದಲ್ಲಿ ಅಪಘಾತ ಸಂಭವಿಸಿದರೂ, ಜೆನ್ನಿಗೆ ಅಥವಾ ಅವಳ ಕನಸಿಗೆ ಯಾವ ನ್ಯೂತತೆಗಳೂ, ಬಲಹೀನತೆಗಳೂ ಸಂಭವಿಸಿಲ್ಲ. ನೀವು ಸ್ತ್ರೀ ಅಲ್ಲವೇ? ಪೈಲಟ್ ಆಗಬೇಕೆ? ಪದೇ ಪದೇ ಕೇಳುತ್ತಿದ್ದ ಪ್ರಶ್ನೆಗಳಿಂದ ಜೆನ್ನಿಗೆ ನಿರುತ್ಸಾಹವಾಗಲಿಲ್ಲ. ಅವಳು ದೃತಿಗೆಡದೆ ದೃಢನಿಶ್ಚಯದಿಂದ ಮುಂದೆ ಸಾಗುತ್ತಿದ್ದಳು. ಈಗ ಜೆನ್ನಿ ಸಾಧನಾಶೀಲ ಮಹಿಳಾ ಮಣಿಗಳಿಗೆ ಪ್ರೇರಣೆ ಹಾಗೂ ಕೇರಳದ ಅಭಿಮಾನವೂ ಹೌದು.