ಕಾಸರಗೋಡು: ಕಾಸರಗೋಡು ಜಿಲ್ಲೆಗಾಗಿ ನಡೆಸುವ ಆಕ್ಸಿಜನ್ ಸಿಲಿಂಡರ್ ಚಾಲಂಜ್ ನಲ್ಲಿ ಎಲ್ಲರೂ ಭಾಗಿಗಳಾಗುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮತ್ತು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ವಿನಂತಿಸಿದರು.
ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ತಲೆದೋರಿರುವ ಆಕ್ಸಿಜನ್ ಕೊರೆತೆಯ ಪರಿಹಾರಕ್ಕಾಗಿ ಜಿಲ್ಲೆ ಎಲ್ಲ ಸಹೃದಯರಿಂದ ಈ ನಿಟ್ಟಿನಲ್ಲಿ ಸಹಕಾರ ಬಯಸಲಾಗುತ್ತಿದೆ. ಸಾಮಾಜಿಕ, ಸಾಂಸ್ಕøತಿಕ, ಉದ್ಯಮ, ಸ್ವಯಂ ಸೇವಾ ಸಂಘಟನೆಗಳ ಮಂದಿ, ಒಕ್ಕೂಟಗಳು ಆರೋಗ್ಯ- ಔದ್ಯಮಿಕ ಅಗತ್ಯಗಳಿಗಾಗಿ, ಇನ್ನಿತರ ವಿಚಾರಗಳಿಗಾಗಿ ಬಳಸಲಾಗುವ ಡಿ ಟೈಪ್ ಸಿಲಿಂಡರ್ ಗಳನ್ನು ಜಿಲ್ಲೆಗಾಗಿ ದೇಣಿಗೆ ನೀಡಿ ಆಕ್ಸಿಜನ್ ಸಿಲಿಂಡರ್ ಚಾಲೆಂಜ್ ನಲ್ಲಿ ಭಾಗಿಗಳಾಗುವಂತೆ ಅವರು ವಿನಂತಿಸಿದರು.