ಕೊಚ್ಚಿ: ಇಲ್ಲಿನ ಲುಲು ಮಾಲ್ ನಲ್ಲಿ ಮಲಯಾಳಂ ನಟಿ ಮೇಲೆ ಲೈಂಗಿಕ ದೌರ್ಜನ್ಯ ಅನುಭವಿಸಿದ್ದಾರೆ ಎನ್ನಲಾಗಿದೆ. ನಟಿ ತಮಗೆ ಆದ ಅನುಭವ ಹಾಗೂ ತಮ್ಮ ದುಃಖವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಆಕೆಯ ಮತ್ತು ಆಕೆಯ ಸಹೋದರಿಯನ್ನು ಹಿಂಬಾಲಿಸಿ ಅನುಚಿತವಾಗಿ ನಡೆದುಕೊಂಡಿದ್ದಾರೆ ಎನ್ನಲಾಗಿದೆ.
ತನ್ನ ಕುಟುಂಬದೊಂದಿಗೆ ಮಾಲ್‌ವೊಂದಕ್ಕೆ ಭೇಟಿ ನೀಡಿದ ವೇಳೆಯಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಜೊತೆಗೆ ಅನುಚಿತವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ. ಘಟನೆ ನಡೆದ ನಂತರವೂ ಆಕೆಯ ಮೇಲೆ ದೌರ್ಜನ್ಯ ನಡೆಸಿದ ಇಬ್ಬರು ವ್ಯಕ್ತಿಗಳು, ನನ್ನ ಜತೆ ಮಾತಿನ ಚಕಮಕಿ ಗೆ ಯತ್ನಿಸಿದ್ದರು ಅಂತ ಅವರು ಹೇಳಿದ್ದಾರೆ. ಈ ನಟಿಯ ಸಾಮಾಜಿಕ ಜಾಲತಾಣ ಪೋಸ್ಟ್ ಆಧರಿಸಿ ಘಟನೆ ಸಂಬಂಧ ರಾಜ್ಯ ಮಹಿಳಾ ಆಯೋಗ ಪ್ರಕರಣ ಸುಮೋಟೋ ದಾಖಲಿಸಿಕೊಂಡಿದೆಶನಿವಾರ (ಡಿಸೆಂಬರ್ 19) ಈ ಬಗ್ಗೆ ಸಾಕ್ಷ್ಯ ಸಂಗ್ರಹಿಸಲಿದೆ. ಈ ಬಗ್ಗೆ ನಟಿ ಇನ್ನೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ ಎನ್ನಲಾಗಿದೆ.