ಕೊಚ್ಚಿ: ಎಲ್.ಡಿ.ಎಫ್ ನೇತೃತ್ವದಲ್ಲಿ ಎರಡನೇ ಬಾರಿ ಇಂದು ರಚನೆಗೊಳ್ಳಲಿರುವ ನೂತನ ಸರ್ಕಾರದ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಸೂಕ್ತ ಎಂದು ಹೈಕೋರ್ಟ್ ಹೇಳಿದೆ. ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ ನಿನ್ನೆ ಪರಿಗಣಿಸಿದ ಅರ್ಜಿಯ ವಿಚಾರಣೆಯಲ್ಲಿ ಈ ಉಲ್ಲೇಖ ಮಾಡಲಾಗಿದೆ. ಈ ಬಗ್ಗೆ ಸರ್ಕಾರದಿಂದ ವಿವರಣೆ ಪಡೆಯಲು ಕೋರ್ಟ್ ಸೂಚಿಸಿದೆ.
ಐದು ನೂರು ಜನರನ್ನು ಪಾಲ್ಗೊಳ್ಳಿಸಿ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಆಯೋಜಿಸಿದ್ದರ ವಿರುದ್ದ ಕೋವಿಡ್ ಮಾನದಂಡಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ತ್ರಿಶೂರ್ ಮೂಲದ ಸಂಘಟನೆ 'ಹೈಕೋರ್ಟ್ ನ್ನು ಸಂಪರ್ಕಿಸಿತ್ತು. ಟ್ರಿಪಲ್ ಲಾಕ್ ಡೌನ್ ನಡೆಯುತ್ತಿರುವ ತಿರುವನಂತಪುರದಲ್ಲಿ ಸಮಾರಂಭವನ್ನು ಕಾನೂನುಬಾಹಿರವೆಂದು ಘೋಷಿಸಬೇಕೆಂದು ಸಂಸ್ಥೆ ವಿನಂತಿಸಿತ್ತು.
ಕೋವಿಡ್ ಮಾನದಂಡಗಳನ್ನು ಉಲ್ಲಂಘಿಸಿ ಪ್ರಮಾಣ ವಚನ ಸಮಾರಂಭ ಆಯೋಜಿಸಿದ್ದರ ವಿರುದ್ದ ನ್ಯಾಯಾಲಯ ಸ್ಚತಃ ಪ್ರಕರಣ ದಾಖಲಿಸುವಂತೆ ಕೋರಿ ವಕೀಲರು ಸೇರಿದಂತೆ ಹಲವರು ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದರು. ಇಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ಅಪರಾಹ್ನ 3ಕ್ಕೆ ನಡೆಯಲಿದೆ.