ತಿರುವನಂತಪುರ: ಅಗತ್ಯ ಸೇವೆಗಳ ವಿಭಾಗದಲ್ಲಿರುವವರು ತಮ್ಮ ಸಂಸ್ಥೆ ನೀಡಿರುವ ಗುರುತಿನ ಚೀಟಿಯನ್ನು ಲಾಕ್‍ಡೌನ್ ಸಮಯದಲ್ಲಿ ಪ್ರಯಾಣಿಸಲು ಬಳಸಬಹುದು. ಅವರಿಗೆ ವಿಶೇಷ ಪೋಲೀಸ್ ಪಾಸ್ ಅಗತ್ಯವಿಲ್ಲ. ಗೃಹ ಕಾರ್ಮಿಕರು, ಕಾರ್ಮಿಕರು ಮತ್ತು ಇತರ ಕೂಲಿಕೆಲಸಗಾರರಿಗೆ ಇಂದು ಮಾತ್ರ ತಾವೇ ಸ್ವ-ಸಿದ್ಧಪಡಿಸಿದ ಪ್ರಮಾಣಪತ್ರದೊಂದಿಗೆ ಪ್ರಯಾಣಿಸಬಹುದು. ಕೊರೋನಾ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಲಾಕ್‍ಡೌನ್ ಘೋಷಣೆಯ ಹಿನ್ನೆಲೆಯಲ್ಲಿ ಇಂತಹ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಪೋಲೀಸ್ ಪಾಸ್ ಗಾಗಿ ಅರ್ಜಿ ಸಲ್ಲಿಸಲು ಆನ್‍ಲೈನ್ ವ್ಯವಸ್ಥೆ ಇಂದು ಸಂಜೆ ವೇಳೆಗೆ ಲಭ್ಯವಿರುತ್ತದೆ. ಆ ಬಳಿಕ ಮೇಲಿನ ವರ್ಗದಲ್ಲಿರುವವರು ನೇರವಾಗಿ ಅಥವಾ ತಮ್ಮ ಉದ್ಯೋಗದಾತರ ಮೂಲಕ ಪಾಸ್ ಗಾಗಿ ಅರ್ಜಿ ಸಲ್ಲಿಸಬೇಕು. ತುರ್ತಾಗಿ ಪಾಸ್ ಅಗತ್ಯವಿರುವವರು ಸ್ಟೇಷನ್ ಹೌಸ್ ಅಧಿಕಾರಿಗಳನ್ನು ಸಂಪರ್ಕಿಸಿ ಪಾಸ್ ಗಾ ನೇರವಾಗಿ ಅರ್ಜಿ ಸಲ್ಲಿಸಬಹುದು. ತೆರಳಲು ಮತ್ತು ಮರಳಿ ಬರಲು ಅಗತ್ಯವಿರುವ ಪಾಸ್‍ಗಳನ್ನು ಸ್ಟೇಷನ್ ಹೌಸ್ ಆಫೀಸರ್ ಪ್ರಾರಂಭದ ಹಂತದಲ್ಲಿ ನೀಡುತ್ತಾರೆ.