ಕಾಸರಗೋಡು: ಕೋವಿಡ್ ಸೋಂಕು ಬಾಧಿತರಲ್ಲಿ ನೆಗೆಟಿವ್ ಆದವರಿಗೆ ನಂತರ ಕಂಡುಬರುವ ಕೆಲವು ಆರೋಗ್ಯ ಸಮಸ್ಯೆಗಳ ಚಿಕಿತ್ಸೆ ಅಂಗವಾಗಿ ಕಳನಾಡು ಸರಕಾರಿ ಹೋಮಿಯೋ ಆಸ್ಪತ್ರೆಯಲ್ಲಿ ಪ್ರತ್ಯೇಕ ಕ್ಲಿನಿಕ್ (ಕೋವಿಡ್ ನಂತರದ ಅವಧಿಯ ಕ್ಲಿನಿಕ್) ಚಟುವಟಿಕೆ ಆರಂಭಿಸಿದೆ. ಪ್ರತಿ ಮಂಗಳ, ಗುರುವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಈ ಕ್ಲಿನಿಕ್ ಚಟುವಟಿಕೆ ನಡೆಸಲಿದೆ.
ಆಸ್ಪತ್ರೆಯಲ್ಲಿ ಈ ಸಂಬಂಧ ಜರುಗಿದ ಸಮಾರಂಭದಲ್ಲಿ ಕಾಸರಗೋಡು ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಸೈಮಾ ಕ್ಲಿನಿಕ್ ಉದ್ಘಾಟಿಸಿದರು. ಉಪಾಧ್ಯಕ್ಷ ಅಶ್ರಫ್ ಆಲಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಹೋಮಿಯೋ ವೈದ್ಯಾಧಿಕಾರಿ ಡಾ.ಅಶೋಕ್ ಕುಮಾರ್ ಐ.ಆರ್. ಮುಖ್ಯ ಅತಿಥಿಯಾಗಿದ್ದರು. ಬ್ಲೋಕ್ ಪಂಚಾಯತ್ ಸದಸ್ಯರಾದ ಝಕೀನಾ ಅಬ್ದುಲ್ಲ, ಝಮೀರಾ ಅನ್ಸಾರಿ, ಅಶ್ರಫ್ ಚೆರ್ಕಳ, ಕಲಾಭವನ್ ರಾಜು, ಬದ್ರುಲ್ ಮುನೀರ್, ಹನೀಫ ಚೆಮ್ನಾಡ್, ಗ್ರಾಮ ಪಂಚಾಯತ್ ಸದಸ್ಯೆ ಜಾನಕಿ, ಓರ್ತೋ ಸ್ಪೆಷ್ಯಾಲಿಟಿ ವೈದ್ಯಾಧಿಕಾರಿ ಡಾ.ಎಂ.ಎಸ್.ಷೀಬಾ ಮೊದಲಾದವರು ಉಪಸ್ಥಿತರಿದ್ದರು. ಆಸ್ಪತ್ರೆ ವರಿಷ್ಠಾಧಿಕಾರಿ ಕೆ.ಕೆ.ಸಲೀನಾ ಸ್ವಾಗತಿಸಿದರು. ಧನ್ಯಾ ವಂದಿಸಿದರು.