HEALTH TIPS

ಅಧ್ಯಯನ ಪೂರ್ಣಗೊಳಿಸದೆ, ಹತ್ತು ವರ್ಷ ನಕಲಿ ಪ್ರಮಾಣ ಪತ್ರದೊಂದಿಗೆ ವೈದ್ಯೆ: ಮಹಿಳಾ ಸ್ತ್ರೀರೋಗತಜ್ಞೆ ಅಮಾನತು!

                    ಕೊಲ್ಲಂ: ನಕಲಿ ಪ್ರಮಾಣಪತ್ರವನ್ನು ತಯಾರಿಸಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಪಡೆದ ಮಹಿಳಾ ಸ್ತ್ರೀರೋಗತಜ್ಞರನ್ನು ಅಮಾನತುಗೊಳಿಸಲಾಗಿದೆ. ಕರುನಾಗಪಳ್ಳಿ ತಾಲ್ಲೂಕು ಆಸ್ಪತ್ರೆಯ ಕಿರಿಯ ಸಲಹೆಗಾರೆ, ಸ್ತ್ರೀರೋಗತಜ್ಞೆ ಮತ್ತು ವಾರಣಾದ್ ನ ಚೇರ್ತಲ ಮೂಲದ ಟಿ.ಎಸ್.ಸೀಮಾ ಅವರನ್ನು ಅಮಾನತುಗೊಳಿಸಲಾಗಿದೆ. ಆರೋಗ್ಯ ಇಲಾಖೆಯ ನಿರ್ದೇಶಕರ ಆದೇಶದನ್ವಯ ಕ್ರಮ ಕೈಗೊಳ್ಳಲಾಗಿದೆ. 

                  ಸೀಮಾ 7 ವರ್ಷಗಳಿಂದ ಕರುನಾಗಪಳ್ಳಿ ತಾಲ್ಲೂಕು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಅವರು 2011 ರಿಂದ ಸರ್ಕಾರಿ ಸೇವೆಯಲ್ಲಿದ್ದಾರೆ ಮತ್ತು ಚೇರ್ತ¯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮತ್ತು ನಂತರ ಚೇರ್ತಲ ತಾಲ್ಲೂಕು ಆಸ್ಪತ್ರೆಯಲ್ಲಿ ಕೆಲಸ ಮಾಡಿದರು. ವೆಸ್ಟ್ ಕಲ್ಲಾಡದ ನಿವಾಸಿ ಟಿ ಸಾಬು ದೂರು ನೀಡಿದ್ದು, ಪ್ರಮಾಣಪತ್ರ ಖೋಟಾ ಎಂದು ತಿಳಿದುಬಂದಿದೆ.

                    ಸಾಬು ಅವರ ಪತ್ನಿ ಶ್ರೀದೇವಿಯನ್ನು ಹೆರಿಗೆಗಾಗಿ 2019 ರ ನವೆಂಬರ್‍ನಲ್ಲಿ ಕರುನಾಗಪಳ್ಳಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. 11 ರಂದು ಶ್ರೀದೇವಿಗೆ ಹೆರಿಗೆಯಾದ ಕೂಡಲೇ ಮಗು ಮೃತಪಟ್ಟಿತು. ಈ ಘಟನೆಯು ವೈದ್ಯರ ವಿರುದ್ಧ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ದೂರಿನ ನಂತರ ಅಂತ್ಯಕ್ರಿಯೆ ನಡೆಸಲಾದ ಶವವನ್ನು ಭಾರೀ ದೂರುಗಳ ಹಿನ್ನೆಲೆಯಲ್ಲಿ ಶವಪರೀಕ್ಷೆ ನಡೆಸಲಾಯಿತು. ಸೀಮಾ ಮಹಾರಾಷ್ಟ್ರದ ಮಹಾತ್ಮ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನಲ್ಲಿ ಅಧ್ಯಯನ ಮಾಡಿದ್ದರು. ಅಲ್ಲಿ ಅವರು ಸ್ತ್ರೀರೋಗ ಶಾಸ್ತ್ರವನ್ನು ಅಭ್ಯಸಿಸಿದ್ದರು. 

               2008 ರಲ್ಲಿ ಅವರು ಎರಡು ವರ್ಷಗಳ ಡಿಜಿಒ ಕೋರ್ಸ್‍ಗೆ ಸೇರಿಕೊಂಡರು ಮತ್ತು ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಲಿಲ್ಲ ಎಂಬ ಉತ್ತರ ಬಳಿಕ ಲಭ್ಯವಾಯಿತು. ಮುಖ್ಯಮಂತ್ರಿ, ಆರೋಗ್ಯ ಸಚಿವರು ಮತ್ತು ಇಲಾಖೆಯ ಕಾರ್ಯದರ್ಶಿಗೆ ದೂರು ನೀಡಲಾಗಿತ್ತು. ಆರೋಗ್ಯ ಇಲಾಖೆಯ ವಿಜಿಲೆನ್ಸ್ ಘಟಕದ ತಪಾಸಣೆಯಲ್ಲಿ ಪ್ರಮಾಣ ಪತ್ರದ ವಂಚನೆಯನ್ನು ಪತ್ತೆಹಚ್ಚಿ,  ಅಮಾನತುಗೊಳಿಸಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries