ತಿರುವನಂತಪುರ: ಮಲೆಯಾಳದ ಖ್ಯಾತ ಕವಿ ಸಚಿದಾನಂದನ್ ಅವರಿಗೆ ಫೇಸ್ ಬುಕ್ ಬಳಸುವುದನ್ನು ನಿಷೇಧಿಸಲಾಗಿದೆ. ಕಂಪನಿಯು 24 ಗಂಟೆಗಳ ಕಾಲ ವೀಡಿಯೊ ಪೋಸ್ಟ್ ಮಾಡುವುದನ್ನು ನಿಷೇಧಿದೆ. ಒಂದು ತಿಂಗಳು ನೇರಪ್ರಸಾರ ಮಾಡುವುದನ್ನು ಸಹ ನಿಷೇಧಿಸಲಾಗಿದೆ.
ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಕುರಿತ ಅವಹೇಳನಕಾರಿ ಪೋಸ್ಟ್ ನ ಹೆಸರಿನಲ್ಲಿ ಈ ನಿಷೇಧ ಮಾಡಲಾಗಿದೆ. ‘ಬಿಜೆಪಿಯನ್ನು ಅವಹೇಳನಗೈದುದಕ್ಕೆ ಈ ಕ್ರಮ ಎನ್ನಲಾಗಿದೆ. ಸರ್ಕಾರ ಮತ್ತು ಫೇಸ್‍ಬುಕ್ ಪರಸ್ಪರ ತೀರ್ಮಾನಿಸಿ ಈ ಕ್ರಮ ಕೈಗೊಂಡಿರುವುದಾಗಿ ಸಚಿದಾನಂದನ್ ಹೇಳಿದರು. ಮೊನ್ನೆ ರಾತ್ರಿ ಫೇಸ್‍ಬುಕ್ ಖಾತೆ ನಿಷೇಧಿಸಲಾಗಿದೆ ಎಂದು ಅವರು ಹೇಳಿದರು.