ತಿರುವನಂತಪುರ: ಕೋವಿಡ್ ವ್ಯಾಕ್ಸಿನೇಶನ್ ತುರ್ತು ನೀಡಬೇಕಾದ ಅದ್ಯತೆಯ ಪಟ್ಟಿಗೆ ಇನ್ನೂ 11 ವಿಭಾಗಗಳನ್ನು ಸೇರಿಸಲು ಪರಿಷ್ಕøತ ಪಟ್ಟಿ ತಯಾರಿಸಲಾಗಿದೆ. 18 ರಿಂದ 45 ವರ್ಷದೊಳಗಿನವರಿಗೆ ವ್ಯಾಕ್ಸಿನೇಷನ್ ಆದ್ಯತೆಯ ವಿಭಾಗದಲ್ಲಿ ಇನ್ನು ವಿದೇಶದಲ್ಲಿ ಅಧ್ಯಯನ ಮಾಡುವ ಮತ್ತು ಕೆಲಸ ತೆರಳುವವರನ್ನು ಸೇರಿಸಲು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ವಿದೇಶಕ್ಕೆ ತೆರಳುವವರಿಗೆ ಅನೇಕ ದೇಶಗಳು ಲಸಿಕೆ ಕಡ್ಡಾಯಗೊಳಿಸಿರುವುದರಿಂದ ಸರ್ಕಾರ ಈ ನಿಟ್ಟಿನಲ್ಲಿ ತುರ್ತು ನಿರ್ಧಾರ ತೆಗೆದುಕೊಂಡಿದೆ. ವ್ಯಾಕ್ಸಿನೇಷನ್ ನ ಆದ್ಯತೆಯ ವಿಭಾಗದಲ್ಲಿ ಇನ್ನೂ 11 ವಿಭಾಗಗಳನ್ನು ಸೇರಿಸಲಾಗಿದೆ ಎಂದು ಸಚಿವರು ಹೇಳಿದರು.
ಆಹಾರ ನಾಗರಿಕ ಸರಬರಾಜು ಇಲಾಖೆಯ ಸಿಬ್ಬಂದಿಗಳು, ಎಫ್ ಸಿ ಐ ನ ಸಿಬ್ಬಂದಿಗಳು, ಅಂಚೆ ಇಲಾಖೆಯ ಸಿಬ್ಬಂದಿಗಳು, ಸಾಮಾಜಿಕ ನ್ಯಾಯ ಇಲಾಖೆಯ ಸಿಬ್ಬಂದಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು, ಪಶು ಸಂಗೋಪನಾ ಇಲಾಖೆಯ ಸಿಬ್ಬಂದಿಗಳು, ಎಸ್ ಎಸ್ ಎಲ್ ಸಿ., ಎಚ್ ಎಸ್ ಸಿ, ವಿ ಎಚ್ ಎಸ್ ಎಸ್ ಸಿ. ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ನೇಮಕಗೊಂಡಿರುವ ಶಿಕ್ಷಕರು ವ್ಯಾಕ್ಸಿನೇಷನ್ ಆದ್ಯತೆಯ ಹೊಸ ವರ್ಗದಲ್ಲಿ ಸೇರ್ಪಡೆಗೊಂಡಿದ್ದು, ಜೊತೆಗೆ ವಿದೇಶದಲ್ಲಿ ವ್ಯಾಸಂಗ ಮಾಡುವ ಮತ್ತು ವಿದೇಶದಲ್ಲಿ ಕೆಲಸ ಮಾಡುವವರಿಗೆ, ಸಮುದ್ರಯಾನಗಾgರಿಗೆ ಲಸಿಕೆ ಮೊದಲ ಆದ್ಯತೆಯೆಂಬಂತೆ ನೀಡಲಾಗುವುದು.
ಈ ಹಿಂದೆ 32 ವಿಭಾಗಗಳಲ್ಲಿರುವವರನ್ನು ಕೋವಿಡ್ ಮೊದಲ ಸಾಲಿನ ಹೋರಾಟಗಾರರೆಂದು ಪರಿಗಣಿಸಲಾಗುತ್ತಿತ್ತು ಮತ್ತು ಈ ಮೊದಲು 18 ರಿಂದ 45 ವರ್ಷದೊಳಗಿನ ಆದ್ಯತೆಯ ವಿಭಾಗದಲ್ಲಿ ಸೇರಿಸಿಕೊಳ್ಳಲಾಯಿತು. ಆದಾಗ್ಯೂ, ಹೆಚ್ಚಿನ ಜನರನ್ನು ಆದ್ಯತೆಯ ವಿಭಾಗದಲ್ಲಿ ಸೇರಿಸುವ ಅವಶ್ಯಕತೆಯ ಬೇಡಿಕೆ ಬಂದಿದ್ದು ರಾಜ್ಯ ಮಟ್ಟದ ಸಮಿತಿ ಸಭೆಯ ಶಿಫಾರಸಿನ ಆಧಾರದ ಮೇಲೆ 11 ವಿಭಾಗಗಳನ್ನು ಸೇರಿಸಲಾಗಿದೆ.