HEALTH TIPS

ಪಶ್ಚಿಮ ಬಂಗಾಳ ಫಲಿತಾಂಶ: ರಾಜ್ಯ ಗೆದ್ದರೂ ಶಿಷ್ಯನೆದುರು ಸೋಲುಂಡ ಮಮತಾ ಬ್ಯಾನರ್ಜಿ

          ಕೋಲ್ಕತ್ತ: ತೀವ್ರ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. ಯಾವ ಪಕ್ಷ ಹೆಚ್ಚು ಸ್ಥಾನ ಗಳಿಸುತ್ತಿದೆ, ಗೆದ್ದ ಪ್ರಮುಖರು ಯಾರು, ಸೋತ ಪ್ರಮುಖರು ಯಾರು, ಯಾವ ಕ್ಷೇತ್ರದ ಜನ ಯಾರಿಗೆ ಹೆಚ್ಚು ಮನ್ನಣೆ ನೀಡಿದ್ದಾರೆ? ಮುಖ್ಯಾಂಶಗಳು ಮತ್ತು ಫಲಿತಾಂಶದ ಲೇಟೆಸ್ಟ್ ಅಪ್‌ಡೇಟ್ಸ್ ಇಲ್ಲಿವೆ.

        *ನಂದಿಗ್ರಾಮ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿಗೆ 1200 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಸುಮೇಂದುಅಧಿಕಾರಿ ಸೋಲು ಕಂಡಿದ್ದಾರೆ.

       * ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಂದಾಗಿಯೇ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಜಯಭೇರಿ ಬಾರಿಸಿತು ಎಂದು ಬಿಜೆಪಿ ಹೇಳಿದೆ. 'ರಾಜ್ಯದಲ್ಲಿ ಪಕ್ಷವು ಸೋಲಲು ಏನು ಕಾರಣಗಳು ಎನ್ನುವ ಬಗ್ಗೆ ಆತ್ಮವಿಮರ್ಶೆ ಮಾಡಲಾಗುವುದು' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗಿಯಾ ತಿಳಿಸಿದ್ದಾರೆ.

      * ಪಶ್ಚಿಮ ಬಂಗಾಳದಲ್ಲಿ ಅಕ್ಷರಶಃ ಕಾಂಗ್ರೆಸ್ ಮತ್ತು ಎಡಪಕ್ಷಗಳು ನೆಲಕಚ್ಚಿವೆ. ವಿಧಾನಸಭೆ ಚುನಾವಣೆಯಲ್ಲಿ ಒಂದೂ ಕ್ಷೇತ್ರದಲ್ಲಿ ಮುನ್ನಡೆ ಪಡೆಯಲಾಗದೆ ಎರಡೂ ಪಕ್ಷಗಳು ಭಾರೀ ಆಘಾತ ಅನುಭವಿಸಿವೆ. ಟಿಎಂಸಿ, ಬಿಜೆಪಿ ಅಬ್ಬರದ ನಡುವೆ ಕಾಂಗ್ರೆಸ್, ಎಡಪಕ್ಷಗಳ ಅಭ್ಯರ್ಥಿಗಳು ಹೀನಾಯ ಸೋಲನುಭವಿಸಿದ್ದಾರೆ.

       * ಪಶ್ಚಿಮ ಬಂಗಾಳದ 292 ಕ್ಷೇತ್ರಗಳ ಪೈಕಿ ಸಂಜೆ ವೇಳೆಗೆ ಟಿಎಂಸಿ 212, ಬಿಜೆಪಿ 78 ಮತ್ತು ಇತರರು ಒಂದು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದವು. ಆದರೆ, ಫಲಿತಾಂಶದ ಪಟ್ಟಿಯಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಸುಳಿವೇ ಇಲ್ಲ. ಎಡಪಕ್ಷವೂ ಸಹ ಕೇವಲ ಏಕೈಕ ಕ್ಷೇತ್ರದಲ್ಲಿ ಮುನ್ನಡೆ ಹಿನ್ನಡೆ ಪಡೆಯುತ್ತಿದ್ದು, ಎರಡೂ ಪಕ್ಷಗಳು ಧೂಳೀಪಟವಾಗಿವೆ.

      * 'ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದ ಹುಲಿ' ಎಂದು ಶಿವಸೇನಾ ಸಂಸದ ಸಂಜಯ್‌ ರಾವುತ್‌ ಹೇಳಿದ್ದಾರೆ. 'ಮಮತಾ ಅವರನ್ನು ಸೋಲಿಸುವುದು ಸುಲಭವಲ್ಲ. ಮಮತಾ ಅವರನ್ನು ಸೋಲಿಸಲು ಬಿಜೆಪಿ ಬಹಳ ಶ್ರಮಪಟ್ಟಿತು. ಅಪಾರ ಹೂಡಿಕೆ ಮಾಡಿತು' ಎಂದು ಅವರು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries