HEALTH TIPS

ಕೋವಿನ್‌: ಹಿರಿಯರಿಗೆ, ವಿಶೇಷ ಚೇತನರಿಗೆ ಮನೆಯ ಹತ್ತಿರವೇ ಕೋವಿಡ್‌ ಲಸಿಕೆ

            ನವದೆಹಲಿ: ಹಿರಿಯ ನಾಗರಿಕರಿಗೆ ಮತ್ತು ವಿಶೇಷ ಚೇತನರಿಗೆ ಮನೆಯ ಸಮೀಪವೇ ಕೋವಿಡ್‌ ಲಸಿಕೆ ಪಡೆಯಬಹುದಾದ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಒದಗಿಸಿದೆ.

           ಮನೆಯ ಸಮೀಪ ಕೋವಿಡ್‌ ಲಸಿಕಾ ಕೇಂದ್ರ(ಎನ್‌ಎಚ್‌ಸಿವಿಸಿ)ವನ್ನು ಸ್ಥಾಪಿಸಲು ಕೇಂದ್ರ ಸರಕಾರ ಸೂಚನೆಗಳನ್ನು ಗುರುವಾರ ಬಿಡುಗಡೆ ಮಾಡಿದೆ. 60 ವರ್ಷ ಮೇಲ್ಪಟ್ಟವರಿಗೆ ಮತ್ತು ವಿಶೇಷ ಚೇತನರಿಗೆ ಕೋವಿಡ್‌ ಲಸಿಕೆ ಪಡೆಯಲು ಸುಲಭವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.


          ಈಗಾಗಲೇ ಮೊದಲ ಡೋಸ್‌ ಪಡೆದಿರುವ ಮತ್ತು ಇನ್ನೂ ಮೊದಲ ಡೋಸ್‌ ಹಾಕಿಸಿಕೊಳ್ಳದಿರುವ 60 ವರ್ಷ ಮೇಲ್ಪಟ್ಟ ಎಲ್ಲರೂ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ದೈಹಿಕವಾಗಿ ಮತ್ತು ಆರೋಗ್ಯವಾಗಿ ದೂರದ ಕೇಂದ್ರಗಳಿಗೆ ಹೋಗಲು ಅಶಕ್ತರಾದವರು ಎನ್‌ಎಚ್‌ಸಿವಿಸಿ ಸೇವೆಯನ್ನು ಪಡೆಯಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

         ಇಂತಹ ಲಸಿಕಾ ಕೇಂದ್ರಗಳನ್ನು ಗ್ರಾಮಗಳಲ್ಲಿರುವ ಸಮೂಹ ಭವನಗಳಲ್ಲಿ, ನಿವಾಸಿಗಳ ಸಂಘದ ಕಚೇರಿಗಳಲ್ಲಿ, ಪಂಚಾಯಿತಿ ಕಟ್ಟಡಗಳಲ್ಲಿ, ಶಾಲೆಗಳಲ್ಲಿ ಮತ್ತು ವೃದ್ಧಾಶ್ರಮಗಳಲ್ಲಿ ಸ್ಥಾಪಿಸಲಾಗುವುದು. ಕೋವಿನ್‌(CoWin) ಮೂಲಕ ಫಲಾನುಭವಿಗಳು ಮೊದಲೇ ನೋಂದಣಿ ಮಾಡಿಕೊಳ್ಳಬಹುದು. ಈಗಾಗಲೇ ಚಾಲ್ತಿಯಲ್ಲಿರುವ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲು ವೃದ್ಧರಿಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಪ್ರಮುಖ ಲಸಿಕಾ ಕೇಂದ್ರಗಳು ಎನ್‌ಎಚ್‌ಸಿವಿಸಿಯನ್ನು ನಿರ್ವಹಣೆ ಮಾಡುತ್ತವೆ ಎಂದು ಸಚಿವಾಲಯ ತಿಳಿಸಿದೆ.

         ಪ್ರತಿ ಗ್ರಾಮಗಳ ವೃದ್ಧರು ಮತ್ತು ವಿಶೇಷ ಚೇತನರು ಸುಲಭವಾಗಿ ಭೇಟಿ ನೀಡಬಹುದಾದ ಸ್ಥಳವನ್ನು ಗುರುತಿಸಿ ಅವುಗಳನ್ನು ಕೋವಿನ್‌ ಪೋರ್ಟಲ್‌ಗೆ ಸೇರಿಸಲಾಗುತ್ತದೆ. ಈ ಸೂಚನೆಯನ್ನು ಅನುಷ್ಠಾನಗೊಳಿಸುವಂತೆ ಎಲ್ಲ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಲಾಗಿದೆ ಎಂದು ಸಚಿವಾಲಯದ ವರದಿಯಲ್ಲಿ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries