ಕೊಚ್ಚಿ: ದೇವಸ್ವಂ ಇಲಾಖೆಯನ್ನು ಕೆ ರಾಧಾಕೃಷ್ಣನ್ ಅವರಿಗೆ ನೀಡಿರುವುದು ಸಿಪಿಎಂನ ಕ್ರಾಂತಿಕಾರಿ ನಿರ್ಧಾರವೆಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಕೆ ರಾಧಾಕೃಷ್ಣನ್ ಅವರು ದಲಿತ ಸಮುದಾಯದ ದೇವಸ್ವಂ ಸಚಿವರಾದ ಮೊದಲ ವ್ಯಕ್ತಿ. ಈ ಹಿಂದೆ ಶಿವನ್‍ಕುಟ್ಟಿ ದೇವಸ್ವಂ ಇಲಾಖೆಯನ್ನು ಪಡೆಯುತ್ತಾರೆ ಎಂದು ಅಂದಾಜಿಸಲಾಗಿತ್ತು.
ಕೆ ರಾಧಾಕೃಷ್ಣ 39400 ಮತಗಳೊಂದಿಗೆ ಚೇಲಕ್ಕರದಿಂದ ವಿಧಾನಸಭೆಗೆ ಆಯ್ಕೆಯಾಗಿರುವರು. ಅವರು ದಿವಂಗತ ಎಂ.ಸಿ.ಕೋಚುಣ್ಣಿ ಮತ್ತು ಚಿನ್ನಮ್ಮ ಅವರ ಪುತ್ರ. ಈಗ ಚೇಲಕ್ಕರ ಬಳಿಯ ತೊನ್ನೂರ್ಕರದಲ್ಲಿ ವಾಸಿಸುತ್ತಿದ್ದಾರೆ.
ರಾಧಾಕೃಷ್ಣನ್ ಅವರು ಕೇರಳ ವರ್ಮಾ ಕಾಲೇಜಿನಲ್ಲಿ ಎಸ್ ಎಫ್ ಐ ಘಟಕ ಕಾರ್ಯದರ್ಶಿಯಾಗಿದ್ದರು. ಅವರು ಚೇಲಕರ ಪ್ರದೇಶ ಕಾರ್ಯದರ್ಶಿಯಾಗಿ ಮತ್ತು ಜಿಲ್ಲಾ ಸಚಿವಾಲಯದ ಸದಸ್ಯರಾಗಿ ಸಾರ್ವಜನಿಕ ಸೇವೆಗೆ ಪ್ರವೇಶಿಸಿದರು. ಡಿವೈಎಫ್‍ಐ ಬ್ಲಾಕ್ ಸಮಿತಿ ಕಾರ್ಯದರ್ಶಿ ಮತ್ತು ರಾಜ್ಯ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ವಿಜ್ಞಾನ ಸಾಹಿತ್ಯ ಪರಿಷತ್, ಲೈಬ್ರರಿ ಗ್ರೂಪ್ ಮತ್ತು ಸಂಪೂರ್ಣ ಸಾಕ್ಷರತಾ ಯಜ್ಞ ಯೋಜನೆಗಳಲ್ಲಿ ಕೆಲಸ ಮಾಡಿದ ಅನುಭವಿಗಳಾಗಿದ್ದಾರೆ. 1991 ರಲ್ಲಿ ವಲ್ಲತ್ತೋಳ್ ನಗರ ವಿಭಾಗದಿಂದ ಕೌನ್ಸಿಲರ್ ಆದರು. 1996 ರಲ್ಲಿ ಕೆ ರಾಧಾಕೃಷ್ಣನ್ ಅವರು ನಾಯನಾರ್ ಕ್ಯಾಬಿನೆಟ್‍ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದರು. ಅವರು ಸಿಪಿಎಂ ಕೇಂದ್ರ ಸಮಿತಿಯ ಸದಸ್ಯರಾಗಿದ್ದಾರೆ ಮತ್ತು ದಲಿತ ಮುಕ್ತಿ ಮಂಚ್‍ನ ಅಖಿಲ ಭಾರತ ಅಧ್ಯಕ್ಷರಾಗಿದ್ದಾರೆ. ಮೊದಲ ಬಾರಿಗೆ ವಿಧಾನಸಭಾ ಚುನಾವಣೆ 1996 ರಲ್ಲಿ ಸ್ಪರ್ಧಿಸಿದ್ದರು. ಕೆ ರಾಧಾಕೃಷ್ಣನ್ 2001, 2006 ಮತ್ತು 2011 ರಲ್ಲಿ ಚೇಲಕ್ಕರದ ಶಾಸಕರಾಗಿದ್ದರು. ಅವರು 2001 ರಲ್ಲಿ ಮುಖ್ಯ ವಿಪ್ ಮತ್ತು 2006 ರಲ್ಲಿ ಸ್ಪೀಕರ್ ಆಗಿದ್ದರು. ಅವರು 2016 ರಲ್ಲಿ ಸ್ಪರ್ಧಿಸಿರÀಲಿಲ್ಲ.