ಕಾಸರಗೋಡು: ಜಿಲ್ಲೆಯಲ್ಲಿ ಕೋವಿಡ್-19 ಅನಿಯಂತ್ರಿತವಾಗಿ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜನಜಾಗೃತಿ ಚಟುವಟಿಕೆಗಳನ್ನು ಚುರುಗೊಳಿಸಲಾಗುತ್ತಿದೆ. ಇದರ ಅಂಗವಾಗಿ ನಗರದ ಹೋಟೆಲ್‍ಗಳು, ಹಣ್ಣು-ತರಕಾರಿ ಅಂಗಡಿಗಳು, ಮೀನು ಮಾರುಕಟ್ಟೆಗಳು, ಶಾಪಿಂಗ್ ಸೆಂಟರ್‍ಗಳು ಇತ್ಯಾದಿಗಳಲ್ಲಿ ಕೋವಿಡ್-19 ಸಂಹಿತೆಗಳ ಕುರಿತು ಜನಜಾಗೃತಿ ಚಟುವಟಿಕೆ ನಡೆಸಲಾಗುತ್ತಿದೆ.
ಈ ಸಂಬಂಧ ಭಿತ್ತಿಪತ್ರ ಲಗತ್ತಿಸಲಾಗಿದೆ. ಜಿಲ್ಲಾ ಎಜುಕೇಷನ್ ಆಂಡ್ ಮೀಡಿಯಾ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್, ಸಾಮಾಜಿಕ ಆರೋಗ್ಯ ಕೇಂದ್ರ ಆರೋಗ್ಯ ಸೂಪರ್‍ವೈಸರ್ ಎ.ಕೆ.ಹರಿದಾಸ್, ಕಾಸರಗೋಡು ಜನರಲ್ ಆಸ್ಪತ್ರೆ ಜೂನಿಯರ್ ಆರೋಗ್ಯ ಇನ್ಸ್ ಪೆಕ್ಟರ್ ಶ್ರೀಜಿತ್, ರಾಷ್ಟ್ರೀಯ ಆರೋಗ್ಯ ದೌತ್ಯ ಜ್ಯೂನಿಯರ್ ಕನ್ಸಲ್ಟೆಂಟ್ ಕಮಲ್ ಕೆ.ಜೋಸ್ ಮೊದಲಾದವರು ಜನಜಾಗೃತಿಗೆ ನೇತೃತ್ವ ವಹಿಸಿದ್ದಾರೆ. ಕಾಸರಗೊಡು ಸಿವಿಲ್ಸ ಟೇಷನ್ ನ ಕಚೇರಿಗಳಲ್ಲಿ ಸಾರ್ವಜನಿಕರು ಕುಳಿತುಕೊಳ್ಳಲು ಇರಿಸಲಾದ ಆಸನಗಳನ್ನು ಸಾಮಾಜಿಕ ಅಂತರದೊಂದಿಗೆ ಪುನರ್ ಸ್ಥಾಪಿಸಲಾಗಿದೆ.