ಕಾಸರಗೋಡು: ಕರೊನಾ ಆತಂಕದ ಮಧ್ಯೆ ಆಡಂಬರವಿಲ್ಲದೆ, ಈದುಲ್ ಫಿತೃ ಹಬ್ಬವನ್ನು ಗುರುವಾರ ಜಿಲ್ಲಾದ್ಯಂತ ಆಚರಿಸಲಾಯಿತು. ಹೊಸ ಬಟ್ಟೆ ಧರಿಸಿ, ಆಲಿಂಗನದೊಂದಿಗೆ ಪರಸ್ಪರ ಶುಭಾಶಯ ವಿನಿಮಯ ಮಾಡುವ ದೃಶ್ಯಗಳ್ಯಾವುದೂ ಕಂಡುಬರಲಿಲ್ಲ. ಆರಾಧನಾಲಯಗಳಿಗೆ ತೆರಳದೆ ಅವರವರ ಮನೆಗಳಲ್ಲಿ ಈದ್ ಪ್ರಾರ್ಥನೆ ಸಲ್ಲಿಸಿ ಹಬ್ಬವನ್ನು ಆಚರಿಸಿಕೊಂಡರು.
ಕೋವಿಡ್ ನಿಯಂತ್ರಣದಿಂದ ಈ ಬಾರಿ ಈದುಲ್‍ಫಿತೃ ಹಬ್ಬದ ಅಂಗವಾಗಿ ಖರೀದಿಯಿಲ್ಲದೆ, ಮಾರುಕಟ್ಟೆಯನ್ನೂ ಬಾಧಿಸಿತ್ತು. ಉಳಿದಂತೆ ದಿನಸಿ ಸಾಮಗ್ರಿ, ಹಾಲು, ಮಾಂಸ, ಮೀನು ಮಾರಾಟ ಎಂದಿನಂತೆ ನಡೆದಿತ್ತು. ಆಡಂಬರ ಕಡಿಮೆ ಮಾಡಿ, ಕೋವಿಡ್ ನಿಯಂತ್ರಣಕ್ಕಾಗಿ ಪ್ರಾರ್ಥಿಸುವಂತೆಯೂ ಮುಸ್ಲಿಂ ಧಾರ್ಮಿಕ ಪಂಡಿತರು ಜನರಲ್ಲಿ ಮನವಿ ಮಾಡಿದ್ದರು.