ನವದೆಹಲಿ: ಜೀವವೈವಿಧ್ಯತೆಯ ಮಹತ್ವದ ಬಗ್ಗೆ ದೇಶದ ಯುವಜನತೆಗೆ ಅರಿವು ಮೂಡಿಸಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಕರೆ ನೀಡಿದ್ದಾರೆ.
ಶನಿವಾರ ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆಯ ಸಂದರ್ಭದಲ್ಲಿ ವೆಂಕಯ್ಯನಾಯ್ಡು ತಮ್ಮ ಸಂದೇಶದಲ್ಲಿ, ಇಡೀ ಭೂ ಗ್ರಹ ಪರಸ್ಪರ ಸಂಪರ್ಕ ಹೊಂದಿದ್ದು, ಅದರಲ್ಲಿ ಮಾನವ ಒಂದು ಭಾಗವಾಗಿದ್ದಾನೆ. ಪಕೃತಿಗೆ ಪರಿಹಾರೋಪಾಯದ ಭಾಗ ನಾವಾಗಿದ್ದೇವೆ ಎಂದು ಹೇಳಿದ್ದಾರೆ.
‘ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆಯ ಸಂದರ್ಭದಲ್ಲಿ, ಯುವ ಪೀಳಿಗೆಗೆ ಸುಸ್ಥಿರ ಅಭಿವೃದ್ಧಿಯ ಜೀವನಶೈಲಿ ಮತ್ತು ಜೀವವೈವಿಧ್ಯತೆಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಪಣವನ್ನು ನಾವು ತೆಗದುಕೊಳ್ಳಬೇಕು.’ ಎಂದು ಅವರು ಹೇಳಿದ್ದಾರೆ. ವಿಶೇಷವೆಂದರೆ, ಜೀವವೈವಿಧ್ಯತೆಯ ವಿಷಯಗಳ ಬಗ್ಗೆ ತಿಳಿವಳಿಕೆ ಮತ್ತು ಜಾಗೃತಿ ಹೆಚ್ಚಿಸಲು ವಿಶ್ವಸಂಸ್ಥೆ ಮೇ 22 ರಂದು ಜೈವಿಕ ವೈವಿಧ್ಯತೆಯ ಅಂತಾರಾಷ್ಟ್ರೀಯ ದಿನವನ್ನಾಗಿ ಘೋಷಿಸಿದೆ.