ತಿರುವನಂತಪುರ: ವಿಧಾನಸಭಾ ಚುನಾವಣೆಯ ತೀರ್ಪನ್ನು ಸ್ವೀಕರಿಸುವುದಾಗಿ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ಇದು ಅನಿರೀಕ್ಷಿತ ವೈಫಲ್ಯ ಮತ್ತು ಕಾರಣವಾದ ಅಂಶಗಳ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ರಮೇಶ್ ಚೆನ್ನಿತ್ತಲ ಮಾಧ್ಯಮಗಳಿಗೆ ತಿಳಿಸಿದರು.
ಮತದಾರರ ತೀರ್ಪು ಅಂಗೀಕರಿಸಲ್ಪಟ್ಟಿದೆ. ಅನಿರೀಕ್ಷಿತ ಸೋಲು ಇದು. ಪಕ್ಷದ ವೈಫಲ್ಯವೆಂದು ಭಾವಿಸಲಾರೆ. ವೈಫಲ್ಯದ ಕಾರಣವನ್ನು ಮೌಲ್ಯಮಾಪನ ಮಾಡಲಾಗುತ್ತದೆ. ದೋಷ ಎಲ್ಲಿದೆ ಎಂದು ನಿರ್ಣಯಿಸಿ ಯುಡಿಎಫ್ ಇತರ ಕ್ರಮಗಳೊಂದಿಗೆ ಮುಂದುವರಿಯಲಿದೆ. ಎಡ ಸರ್ಕಾರದ ಲೂಟಿ ಮತ್ತು ಭ್ರಷ್ಟಾಚಾರವನ್ನು ನಾವು ಎತ್ತಿ ತೋರಿಸಿದ್ದೇವೆ ಎಂದರು.
ಗೆಲುವು ಸಾಧಿಸಿದ ಎಲ್ಲರಿಗೂ ಖಂಡಿತ ಅಭಿನಂದನೆಗಳು. ಸೋಲಿನ ಕಾರಣಗಳನ್ನು ಅಧ್ಯಯನ ಮಾಡಲಾಗುತ್ತದೆ ಮತ್ತು ಪ್ರತಿಕ್ರಿಯಿಸಲಾಗುತ್ತದೆ. ನಾವು ಬೆಳೆದದ್ದು ಸತ್ಯದಿಂದ. ಸರ್ಕಾರದ ವೈಫಲ್ಯಗಳನ್ನು ಪ್ರತಿಪಕ್ಷವಾಗಿ ಸಮರ್ಥವಾಗಿ ಎದುರಿಸಿದ್ದೇವೆ. ಅದು ಪ್ರತಿಪಕ್ಷದ ಕರ್ತವ್ಯ ಎಂದು ರಮೇಶ್ ಚೆನ್ನಿತ್ತಲ ಹೇಳಿದರು.
ಜನರ ತೀರ್ಪನ್ನು ಸಂಪೂರ್ಣವಾಗಿ ಗೌರವಿಸಲಾಗುವುದು. ಆದರೆ ಎಡ ಸರ್ಕಾರ ಕಳೆದ ಐದು ವರ್ಷಗಳಿಂದ ಏನೆಲ್ಲ ಮಾಡಿದೆ ಎಂಬುದನ್ನು ಮರೆಯಬಾರದು ಎಂದು ಉಮ್ಮನ್ ಚಾಂಡಿ ಪ್ರತಿಕ್ರಿಯಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಗೆಲುವು ಮತ್ತು ಸೋಲು ಸ್ವಾಭಾವಿಕವಾಗಿದೆ ಮತ್ತು ಗೆದ್ದಾಗ ಹೆಮ್ಮೆಪಡುವೆವು. ಸೋತಾಗ ನಿರಾಶೆಗೊಂಡು ರಾಜಕೀಯದಲ್ಲಿ ಆರಾಮವಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಉಮ್ಮನ್ ಚಾಂಡಿ ಹೇಳಿದರು.
ವೈಫಲ್ಯವನ್ನು ಸವಾಲಿನೊಂದಿಗೆ ತೆಗೆದುಕೊಳ್ಳಲಾಗುತ್ತದೆ. ಕಾರಣವನ್ನು ಪರಿಶೀಲಿಸಲಾಗುವುದು. ಸಹೋದ್ಯೋಗಿಗಳೊಂದಿಗೆ ಸಮಾಲೋಚಿಸಿ, ಪ್ರಜಾಪ್ರಭುತ್ವ ರೀತಿಯ ಚರ್ಚೆಗಳನ್ನು ಪಕ್ಷದಲ್ಲಿ ನಡೆಸಲಾಗುವುದು. ನಾನು 50 ವರ್ಷಗಳ ಹಿಂದೆ ರಾಜಕೀಯಕ್ಕೆ ಆಗಮಿಸಿದ್ದಾಗ ಕಾಂಗ್ರೆಸ್ಸ್ ಗೆ ಇದ್ದ ಮಟ್ಟದಲ್ಲೇ ಮತ್ತೀಗ ಪಕ್ಷ ಬಂದು ತಲಪಿರುವುದು ನಿಜ. ಸ್ಥಳೀಯ ಚುನಾವಣೆಗಳಲ್ಲಿನ ಸೋಲನ್ನು ನಾವು ಗಣನೆಗೆ ತೆಗೆದುಕೊಳ್ಳುವಲ್ಲಿ ವೈಫಲ್ಯಗಳಾದಂತೆ ತೋಚುತ್ತಿದೆ. ಈ ಬಗ್ಗೆ ನಾನು ಹೆಚ್ಚು ಗಮನ ಹರಿಸುತ್ತೇನೆ 'ಎಂದು ಉಮ್ಮನ್ ಚಾಂಡಿ ಹೇಳಿದರು.