HEALTH TIPS

ಖ್ಯಾತ ವಿಜ್ಞಾನಿ ಸಿ.ಎನ್.ಆರ್ ರಾವ್ ಗೆ ಪ್ರತಿಷ್ಠಿತ ಇಎನ್ ಐ ಅಂತಾರಾಷ್ಟ್ರೀಯ ಪ್ರಶಸ್ತಿ!

           ಬೆಂಗಳೂರು: ಭಾರತ ರತ್ನ ಪುರಸ್ಕೃತ ವಿಜ್ಞಾನಿ, ಪ್ರಾಧ್ಯಾಪಕ ಸಿ.ಎನ್.ಆರ್ ರಾವ್ ಪ್ರತಿಷ್ಠಿತ ಅಂತಾರಾಷ್ಟ್ರೀಯ ಇಎನ್ ಐ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಗುರುವಾರ ತಿಳಿಸಿದೆ.

         ನವೀಕರಿಸಬಹುದಾದ ಇಂಧನ ಮೂಲಗಳು ಮತ್ತು ಇಂಧನ ಸಂಗ್ರಹಣೆಯ ಸಂಶೋಧನೆಗಾಗಿ ಈ ಪ್ರಶಸ್ತಿ ಸಂದಿದೆ. ಇದನ್ನು ಎನರ್ಜಿ ಫ್ರಾಂಟಿಯರ್ ಪ್ರಶಸ್ತಿ ಎಂದು ಕರೆಯಲಾಗುತ್ತದೆ. ಶಕ್ತಿ ಸಂಶೋಧನೆಯಲ್ಲಿ ನೊಬೆಲ್ ಪ್ರಶಸ್ತಿ ಎಂದು ಗುರುತಿಸಲಾಗಿದೆ.

          ಪ್ರೊಫೆಸರ್ ರಾವ್ ಶಕ್ತಿಯ ಮೂಲವಾಗಿ ಹೈಡ್ರೋಜನ್ ಮೇಲೆ ಕೆಲಸ ಮಾಡುತ್ತಿದ್ದಾರೆ. ಹೈಡ್ರೋಜನ್ ಸಂಗ್ರಹಣೆ, ಹೈಡ್ರೋಜನ್ ನ ದ್ಯುತಿ ರಾಸಾಯನಿಕ ಮತ್ತು ಎಲೆಕ್ಟ್ರೋಕೆಮಿಕಲ್ ಉತ್ಪಾದನೆ, ಹೈಡ್ರೋಜನ್ ನ ಸೌರ ಉತ್ಪಾದನೆ ಮತ್ತು ಲೋಹವಲ್ಲದ ವೇಗವರ್ಧನೆ ಅವರ ಕೆಲಸದ ಪ್ರಮುಖ ಅಂಶಗಳಾಗಿವೆ.

          ರೋಮ್ ನಲ್ಲಿ ಅಕ್ಟೋಬರ್ 14 ರಂದು ನಡೆಯಲಿರುವ ಸಮಾರಂಭದಲ್ಲಿ ಅಧಿಕೃತವಾಗಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries