ಬದಿಯಡ್ಕ: ಕೋವಿಡ್ 19 ಜಾಗ್ರತಾ ಸಮಿತಿಯ ಸಭೆಯು ಮೇ 11 ರಂದು ಉಕ್ಕಿನಡ್ಕ ಚರ್ಚ್ ಸಭಾಭವನದಲ್ಲಿ ಜರಗಿತು.
ವಾರ್ಡ್ ನ್ನು ಐದು ಕ್ಲಸ್ಟರ್ ಗಳಾಗಿ ವಿಭಜಿಸುವುದರೊಂದಿಗೆ ಪ್ರತಿಯೊಂದಕ್ಕೂ ಸದಸ್ಯರನ್ನು ಸೇರಿಸಲಾಯಿತು.್ತ ವಾರ್ಡ್ ಮಟ್ಟದಲ್ಲಿ ಹೆಲ್ಪ್ ಡೆಸ್ಕ್ ನ್ನು ತೆರೆಯಲಾಯಿತು.
ಬದಿಯಡ್ಕ ಗ್ರಾಮ ಪಂಚಾಯತ್ ಕಾರ್ಯದರ್ಶಿ ಪ್ರದೀಪನ್ ಯಂ, ಉಪಾಧ್ಯಕ್ಷ ಅಬ್ಬಾಸ್, ಬದಿಯಡ್ಕ ಆರೋಗ್ಯ ಇಲಾಖೆಯ ಜೂನಿಯರ್ ನರ್ಸ್ ಸಾಲಿ ಎಂ ಜೆ, ಪಂಚಾಯತ್ ಮಾಷ್ ಸಂಯೋಜಕ ಪ್ರದೀಪ್ ಶೆಟ್ಟಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡಿದರು.
ವಾರ್ಡ್ ಸದಸ್ಯೆ ಜ್ಯೋತಿ ಸ್ವಾಗತಿಸಿ, ನೋಡಲ್ ಅಧಿಕಾರಿ ಕೃಷ್ಣ ಪ್ರಸಾದ್ ವಂದಿಸಿದರು. ಮಾಷ್ ಸಂಯೋಜಕ ಕೃಷ್ಣ ಪ್ರಸಾದ ಟಿ ಕಾರ್ಯಕ್ರಮ ನಿರೂಪಿಸಿದರು.